Publish Date: Tue, 14 May 2019 (11:11 IST)
Updated Date: Tue, 14 May 2019 (11:14 IST)
ಬೆಂಗಳೂರು : ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯವರ ಬಳಿ 10ಕೋಟಿ ರೂ ಪಡೆದಿರುವ ಮಾಹಿತಿ ಇದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶದ ಬಳಿಕ ನಾರಾಯಣ ಗೌಡ ಮುಂಬೈಗೆ ಹೋಗುತ್ತಾರೆ. ಕೆ.ಆರ್.ಪೇಟೆ ಪುರಸಭೆ ಚುನಾವಣೆಗೂ ನಾರಾಯಣಗೌಡ ಇರಲ್ಲ. ಫಲಿತಾಂಶದ ಬಳಿಕ ಎತ್ತಾಕ್ಕೊಂಡು ಹೋಗ್ತಾರೇನೋ ಗೊತ್ತಿಲ್ಲ. ಮಾತುಕತೆಯಂತೆ ಉಳಿದ ಹಣ ಕೊಟ್ರೆ ಹೋಗುತ್ತಾನಂತೆ. ಬಾಕಿ ಕೊಡಿ ಮುಂಬೈಗೆ ಹೋಗುತ್ತೇನೆಂದು ಹೇಳಿದ್ದಾರಂತೆ. ಈ ಬಗ್ಗೆ ಬಿಜೆಪಿ ಸ್ನೇಹಿತರು ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.
ಅಲ್ಲದೇ ಈ ಬಗ್ಗೆ ಜೆಡಿಎಸ್ ನವರಿಗೂ ಗೊತ್ತಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಹಿಂದೆ ಭಂಗ ಆಗಿತ್ತು. ಆಗ ಹಣವನ್ನು ಶಾಸಕ ನಾರಾಯಣಗೌಡಗೆ ನೀಡಲಾಗಿತ್ತು. ಜೆಡಿಎಸ್ ಶಾಸಕ ನಾರಾಯಣಗೌಡ ಹುಟ್ಟು ಗೂಂಡಾ. ಅವನ ಚರಿತ್ರೆ ತಿಳಿಯಬೇಕಾದರೆ ಬಾಂಬೆಗೆ ಹೋಗಬೇಕು. ಒಂದಾ, ಎರಡಾ, ನೂರಾರು ಕೆಟ್ಟ ಕೆಲಸಗಳನ್ನು ಮಾಡಿದ್ದಾನೆ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ವಿರುದ್ಧ ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.