Select Your Language

Notifications

webdunia
webdunia
webdunia
webdunia

ಜಿಮ್ ಟ್ರೈನರ್ ಮೋಸದಾಟಕ್ಕೆ ಮೂವರು ಯುವತಿಯರ ಜೀವನ ಬಲಿ

ಜಿಮ್ ಟ್ರೈನರ್ ಮೋಸದಾಟಕ್ಕೆ ಮೂವರು ಯುವತಿಯರ ಜೀವನ ಬಲಿ
ಚಿಕ್ಕಬಳ್ಳಾಪುರ , ಮಂಗಳವಾರ, 14 ಮೇ 2019 (10:38 IST)
ಚಿಕ್ಕಬಳ್ಳಾಪುರ : ಜಿಮ್‍ ಗೆ ಬರುತ್ತಿದ್ದ ಯುವತಿಯರನ್ನು ಪ್ರೀತಿಸಿ, ಮೋಸ ಮಾಡಿದ್ದಕ್ಕೆ ಟ್ರೈನರ್ ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.




ಬುಲೆಟ್ ಜಿಮ್ ಮಾಲೀಕ ಗೌತಮ್ ಬಂಧಿತ ಆರೋಪಿಯಾಗಿದ್ದು, ಈತ ದೈಹಿಕ ಫಿಟ್‍ನೆಸ್‍ ಗಾಗಿ ಜಿಮ್‍ ಗೆ ಬರುತ್ತಿದ್ದ ಶ್ರೀಮಂತ ಮನೆತನದ ಯುವತಿಯರನ್ನು ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮ ಅಂತ ಅವರನ್ನು ನಂಬಿಸಿ ಅವರ ಜೊತೆಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದ.


ಈತನ ಈ ನೀಚ ಕೃತ್ಯಕ್ಕೆ ಮೂವರು ಯುವತಿಯರ ಜೀವನ ಹಾಳಾಗಿದೆ. ಇವರಲ್ಲಿ ಒಬ್ಬ ಯುವತಿ ಗರ್ಭಿಣಿಯಾದ ಕಾರಣ ಗೌತಮ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ದೂರಿನ ಹಿನ್ನಲೆಯಲ್ಲಿ ಪೊಲೀಸರು  ಆತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಯುವತಿಯನ್ನು ಈತ ಮದುವೆಯಾಗಿರುವುದಾಗಿ ತಿಳಿದುಬಂದಿದೆ, ಮೂರನೇಯವಳು  ಈತನ ಮೋಸದಾಟ ಬಯಲಾಗಿ ಜೈಲು ಸೇರಿರುವುದನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ ಹೆಚ್.ಡಿ.ಕೆ ಕಾರಣ ಎಂದ ಕಾಂಗ್ರೆಸ್ ನ ಮಾಜಿ ಶಾಸಕ