Select Your Language

Notifications

webdunia
webdunia
webdunia
webdunia

ಮಲಗಿದ್ದ ಪತ್ನಿ ಮತ್ತು 9 ತಿಂಗಳ ಮಗುವಿನ ಮೇಲೆ ಪಾಪಿ ಪತಿ ಮಾಡಿದ್ದೇನು ಗೊತ್ತಾ?

ಮಲಗಿದ್ದ ಪತ್ನಿ ಮತ್ತು 9 ತಿಂಗಳ ಮಗುವಿನ ಮೇಲೆ ಪಾಪಿ ಪತಿ ಮಾಡಿದ್ದೇನು ಗೊತ್ತಾ?
ಗದಗ , ಶುಕ್ರವಾರ, 10 ಮೇ 2019 (11:47 IST)
ಗದಗ : ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ಮಲಗಿದ್ದ ಪತ್ನಿ ಮತ್ತು 9 ತಿಂಗಳ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.



ನಿರ್ಮಲಾ ಮೃತ ಮಹಿಳೆ. ರಮೇಶ್, ಪತ್ನಿ, ಮಗುವನ್ನು ಕೊಂದ ಪಾಪಿ. 12 ವರ್ಷದ ಹಿಂದೆ ಮದುವೆಯಾಗಿದ್ದ ನಿರ್ಮಲಾ ಹಾಗೂ ರಮೇಶ್ ದಂಪತಿಗಳಿಗೆ ಮೂವರು ಹೆಣ್ಣುಮಕ್ಕಳು ಆಗಿದ್ದು, ಅದರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಬಹಳ ವರ್ಷಗಳ ಬಳಿಕ ಗಂಡು ಮಗುವಾಗಿತ್ತು.

 

ಇತ್ತೀಚೆಗೆ ಆರೋಪಿ ರಮೇಶ್‍ ಗೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನದಿಂದ ಆಕೆಯ ಜೊತೆ ಜಗಳವಾಡುತ್ತಿದ್ದ. ಆದರೆ ಗುರುವಾರ ಮುಂಜಾನೆ ಪತ್ನಿ ಮತ್ತು ಮಗು ಮಲಗಿದ್ದಾಗಲೇ ಆರೋಪಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಪಕ್ಕದಲ್ಲಿ ಮಲಗಿದ್ದ 9 ತಿಂಗಳು ಮುದ್ದು ಕಂದನನ್ನು ಉಸಿರಿಗಟ್ಟಿಸಿ ಕೊಂದಿದ್ದಾನೆ.

ಬಳಿಕ ನೇರವಾಗಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾಗೆ ಹಾಕಲಾದ ಮೊದಲ ವೋಟ್ ಅಸಿಂಧು ಎಂದು ಚುನಾವಣಾ ಆಯೋಗ ಹೇಳಲು ಕಾರಣವೇನು?