Select Your Language

Notifications

webdunia
webdunia
webdunia
webdunia

ಷರತ್ತಿನೊಂದಿಗೆ ಪತ್ನಿಯರನ್ನು ಕರೆದೊಯ್ಯಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಒಪ್ಪಿಗೆ

ಷರತ್ತಿನೊಂದಿಗೆ ಪತ್ನಿಯರನ್ನು ಕರೆದೊಯ್ಯಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಒಪ್ಪಿಗೆ
ಮುಂಬೈ , ಗುರುವಾರ, 9 ಮೇ 2019 (08:21 IST)
ಮುಂಬೈ: ವಿಶ್ವಕಪ್ ಆಡಲು ಇಂಗ್ಲೆಂಡ್ ಗೆ ತೆರಳಲಿರುವ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯರನ್ನು ಕರೆದೊಯ್ಯಲು ಬಿಸಿಸಿಐ ಷರತ್ತು ಬದ್ಧವಾಗಿ ಒಪ್ಪಿದೆ.


ಈ ಮೊದಲು ವಿಶ್ವಕಪ್ ಗೆ ಪತ್ನಿಯರು ಮತ್ತು ಗೆಳತಿಯರಿಗೆ ಅವಕಾಶವಿಲ್ಲ ಎಂದಿತ್ತು. ಆದರೆ ಇದೀಗ ಆರಂಭದ 21 ದಿನಗಳ ನಂತರ ಪತ್ನಿ ಅಥವಾ ಗೆಳತಿಗೆ ಕ್ರಿಕೆಟಿಗರ ಜತೆ ಪ್ರವಾಸ ಮಾಡಲು ಅವಕಾಶ ಕಲ್ಪಿಸಿದೆ.

21 ದಿನಗಳ ನಂತರ ಕೇವಲ 15 ದಿನ ಮಾತ್ರ ಪತ್ನಿಯರಿಗೆ ಕ್ರಿಕೆಟಿಗರ ಜತೆ ಇರಲು ಅವಕಾಶ ಸಿಗಲಿದೆ. ಅದರಂತೆ ಜೂನ್ 16 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಮಹತ್ವದ ಪಂದ್ಯಕ್ಕೆ ಕ್ರಿಕೆಟಿಗರ ಪತ್ನಿಯರು ಹಾಜರಿರಲ್ಲ. ಇಂತಹ ಮಹತ್ವದ ಟೂರ್ನಿಗಳ ಸಂದರ್ಭದಲ್ಲಿ ಕ್ರಿಕೆಟಿಗರ ಕುಟಂಬದವರ ನಿರ್ವಹಣೆ ಕಷ್ಟವಾಗುತ್ತದೆ ಮತ್ತು ಕ್ರಿಕೆಟಿಗರ ಗಮನ ಬೇರೆ ಕಡೆ ಸೆಳೆಯುತ್ತದೆ ಎಂಬ ಕಾರಣಕ್ಕೆ ಬಿಸಿಸಿಐ ಈ ನಿಯಮ ಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಕ್ವಾಲಿಫೈಯರ್ ಸೋತಿದ್ದಕ್ಕೆ ಬ್ಯಾಟ್ಸ್ ಮನ್ ಗಳ ಮೇಲೆ ಧೋನಿ ಸಿಟ್ಟು