Publish Date: Wed, 08 May 2019 (08:30 IST)
Updated Date: Wed, 08 May 2019 (08:32 IST)
ಚೆನ್ನೈ: ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮನ್ ಗಳ ಮೇಲೆ ನಾಯಕ ಧೋನಿ ಸಿಟ್ಟು ಹೊರಹಾಕಿದ್ದಾರೆ.
ಸೋಲಿಗೆ ಬ್ಯಾಟ್ಸ್ ಮನ್ ಗಳ ವೈಫಲ್ಯವೇ ಕಾರಣ ಎಂದು ಧೋನಿ ಗೂಬೆ ಕೂರಿಸಿದ್ದಾರೆ. ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಬ್ಯಾಟ್ಸ್ ಮನ್ ಗಳು ಕೇವಲ 131 ರನ್ ಗಳಷ್ಟೇ ಕಲೆ ಹಾಕಿದ್ದರು. ಇದು ಮುಂಬೈಗೆ ಸುಲಭ ತುತ್ತಾಗಿತ್ತು.
‘ತವರಿನಲ್ಲಿ ಪಿಚ್ ಹೇಗೆ ವರ್ತಿಸುತ್ತದೆ, ಬಾಲ್ ಹೇಗೆ ಬ್ಯಾಟ್ ಗೆ ಬರುತ್ತಿದೆ, ಪಿಚ್ ಕಂಡೀಷನ್ ಹೇಗೆ ಎಂದು ನಮಗೆ ಗೊತ್ತಿರಬೇಕು. ಅದಕ್ಕೇ ತವರಿನ ಬಲ ಎನ್ನುತ್ತೇವೆ. ಆದರೆ ನಾವು ಅದರಲ್ಲೇ ವಿಫಲರಾಗಿದ್ದೇವೆ. ಅದೂ 6-7 ಪಂದ್ಯವಾಡಿದ ಮೇಲೆ ಗೊತ್ತಾಗಲೇಬೇಕು. ನಮ್ಮ ಕೆಲವು ಬ್ಯಾಟ್ಸ್ ಮನ್ ಗಳಿಗೆ ಯಾವಾಗ ಹೇಗೆ ಆಡಬೇಕೆಂದು ಗೊತ್ತಿದೆ. ಆದರೆ ಅವರೇ ತಪ್ಪು ಮಾಡಿದರು. ಮುಂದಿನ ಪಂದ್ಯದಲ್ಲಿ ಈ ತಪ್ಪು ಸರಿ ಹೋಗಬಹುದು ಅಂದುಕೊಳ್ಳುತ್ತೇನೆ’ ಎಂದು ಧೋನಿ ಆಕ್ರೋಶ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ