Publish Date: Tue, 14 May 2019 (08:05 IST)
Updated Date: Tue, 14 May 2019 (08:07 IST)
ಮುಂಬೈ: ಧೋನಿ ಬಳಿ ಪಡೆಯುವ ಟಿಪ್ಸ್ ನಿಂದ ಎಷ್ಟೋ ಸಹಾಯವಾಗುತ್ತದೆ ಎಂದು ಇಷ್ಟು ದಿನ ಕೊಂಡಾಡುತ್ತಿದ್ದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಇದೀಗ ಧೋನಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಧೋನಿ ನೀಡುವ ಟಿಪ್ಸ್ ಯಾವತ್ತಾದರೂ ಪ್ರಶ್ನೆ ಮಾಡಿದ್ದಿದೆಯಾ ಎಂದು ಸಂದರ್ಶಕರು ಕೇಳಿದಾಗ ಕುಲದೀಪ್ ಕೆಲವೊಮ್ಮೆ ಧೋನಿ ಕೊಡುವ ಟಿಪ್ಸ್ ಕೈಕೊಟ್ಟಿದ್ದೂ ಇದೆ ಎಂದು ತಮಾಷೆ ಮಾಡಿದ್ದಾರೆ.
‘ಕೆಲವೊಮ್ಮೆ ಅವರು ಕೊಡುವ ಟಿಪ್ಸ್ ಕೆಲಸ ಮಾಡದೇ ಇರುವುದೂ ಇದೆ. ಆದರೆ ಅದನ್ನು ಅವರ ಬಳಿ ಹೇಳಲಾಗದು’ ಎಂದು ಕುಲದೀಪ್ ಹಾಸ್ಯ ಮಾಡಿದ್ದಾರೆ. ಕುಲದೀಪ್ ಈ ಮಾತನ್ನು ತಮಾಷೆಯಾಗಿಯೇ ಹೇಳಿದ್ದರೂ ಧೋನಿ ಅಭಿಮಾನಿಗಳು ಕುಲದೀಪ್ ಮಾತಿಗೆ ಸಿಟ್ಟಿಗೇಳುವ ಸಾಧ್ಯತೆಯೂ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ