Publish Date: Mon, 13 May 2019 (07:16 IST)
Updated Date: Mon, 13 May 2019 (07:18 IST)
ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಎರಡು ಕ್ಯಾಚ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ವಿಕೆಟ್ ಕೀಪಿಂಗ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಎರಡು ಕ್ಯಾಚ್ ಪಡೆಯುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಮಾಡಿದರು.
ಧೋನಿ ಇದೀಗ 132 ವಿಕೆಟ್ ಬಲಿ ಪಡೆದಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದರಲ್ಲಿ 94 ಕ್ಯಾಚ್ ಮತ್ತು 38 ಸ್ಟಂಪ್ ಔಟ್ ಸೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ