Publish Date: Mon, 13 May 2019 (07:53 IST)
Updated Date: Mon, 13 May 2019 (07:54 IST)
ಹೈದರಾಬಾದ್: ಧೋನಿ ಟೀಂ ಇಂಡಿಯಾದಿಂದ ನಿವೃತ್ತಿಯ ಅಂಚಿನಲ್ಲಿದ್ದಾರೆ. ಇತ್ತ ಐಪಿಎಲ್ ನಲ್ಲೂ ಇದುವೇ ಅವರ ಕೊನೆಯ ಸೀಸನ್ ಆಗಿರುತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಐಪಿಎಲ್ ಫೈನಲ್ ನಲ್ಲಿ ಒಂದು ರನ್ ನಿಂದ ಸೋತ ಬಳಿಕ ಸಿಎಸ್ ಕೆ ನಾಯಕ ಧೋನಿಗೆ ಮುಂದಿನ ಬಾರಿ ಐಪಿಎಲ್ ಆಡ್ತೀರಾ ಎಂದು ಪ್ರಶ್ನೆ ಕೇಳಲಾಯಿತು.
ಇದಕ್ಕೆ ಧೋನಿ ಕೂಡಾ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ‘ಬಹುಶಃ ಆಡಬಹುದು’ ಎಂದು ಧೋನಿ ಅಸ್ಪಷ್ಟ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ