Publish Date: Tue, 14 May 2019 (07:43 IST)
Updated Date: Tue, 14 May 2019 (07:46 IST)
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾರನ್ನು ಕ್ರಿಕೆಟ್ ದಿಗ್ಗಜ ವಿಶ್ವದ ಶ್ರೇಷ್ಠ ವೇಗಿ ಎಂದು ಕೊಂಡಾಡಿದ್ದರು.
ಫೈನಲ್ ಪಂದ್ಯದ ಬಳಿಕ ಸಂದರ್ಶನದಲ್ಲಿ ಮುಂಬೈ ಇಂಡಿಯನ್ಸ್ ಸಲಹೆಗಾರರೂ ಆಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಾತನಾಡುವಾಗ ‘ಬುಮ್ರಾ ಸದ್ಯಕ್ಕೆ ವಿಶ್ವದ ಶ್ರೇಷ್ಠ ಬೌಲರ್. ಬಹುಶಃ ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು’ ಎಂದಿದ್ದರು.
ಸಚಿನ್ ಹೊಗಳಿಕೆಯಿಂದ ಉಬ್ಬಿಹೋಗಿರುವ ಬುಮ್ರಾ ಟ್ವಿಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ‘ನನಗೆ ಮಾತೇ ಹೊರಡುತ್ತಿಲ್ಲ. ಥ್ಯಾಂಕ್ಯೂ ಸಚಿನ್ ಸರ್’ ಎಂದು ಬುಮ್ರಾ ಟ್ವೀಟ್ ಮೂಲಕ ಸಚಿನ್ ಗೆ ಧನ್ಯವಾದ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ