Publish Date: Tue, 14 May 2019 (07:32 IST)
Updated Date: Tue, 14 May 2019 (07:34 IST)
ಚೆನ್ನೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ ನಿಂದ ಸೋತ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಆಕ್ರೋಶ ರವೀಂದ್ರ ಜಡೇಜಾ ಮೇಲೆ ತಿರುಗಿದೆ.
ಫೈನಲ್ ಓವರ್ ನಲ್ಲಿ ಚೆನ್ನೈ ಗೆಲುವಿಗೆ 9 ರನ್ ಬೇಕಾಗಿತ್ತು. ಅದ್ಭುತವಾಗಿ ಆಡುತ್ತಿದ್ದ ಶೇನ್ ವ್ಯಾಟ್ಸನ್ ಕ್ರೀಸ್ ನಲ್ಲಿ ಇದ್ದಿದ್ದರಿಂದ ಚೆನ್ನೈ ಗೆಲ್ಲಬಹುದು ಎಂದೇ ಅಭಿಮಾನಿಗಳ ನಿರೀಕ್ಷೆಯಾಗಿತ್ತು.
ಆದರೆ 19 ನೇ ಓವರ್ ನಲ್ಲಿ ಬ್ಯಾಟಿಂಗ್ ಗಿಳಿದಿದ್ದ ಜಡೇಜಾ ಐದು ಎಸೆತ ಎದುರಿಸಿ ಐದೇ ರನ್ ಗಳಿಸಿದರು. ಅಷ್ಟು ಮಾತ್ರವಲ್ಲದೆ, ಶೇನ್ ವ್ಯಾಟ್ಸನ್ ರನೌಟ್ ಗೆ ಕಾರಣರಾದರು. ಹೀಗಾಗಿ ಅಭಿಮಾನಿಗಳ ಆಕ್ರೋಶ ಜಡೇಜಾ ಮೇಲೆ ತಿರುಗಿದೆ. ಜಡೇಜಾರಂತಹವರು ಇದ್ದರೆ ಎದುರಾಳಿಗಳಿಗೆ ಕೆಲಸವೇ ಇರಲ್ಲ. ಅವರೇ ತಂಡವನ್ನು ಸೋಲಿಸುತ್ತಾರೆ ಎಂದು ಜಡೇಜಾರನ್ನು ಟ್ವಿಟರಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ