Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರು?

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರು?
ಬೆಂಗಳೂರು , ಭಾನುವಾರ, 26 ಮೇ 2019 (16:27 IST)
ರಾಜ್ಯದಲ್ಲಿ ಶುರುವಾಯಿತಾ ಮತ್ತೆ ರೆಸಾರ್ಟ್ ರಾಜಕಾರಣ? ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ.

ಮೈತ್ರಿ ನಾಯಕರ ಕೈಗೆ ಸಿಗದೇ ಗೋವಾಗೆ ಕೈ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಜತೆಗೆ ಕೆಲವು ಶಾಸಕರು ಹೋಗಿರೋ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಫ್ಲಾನ್ ನಡೆಯುತ್ತಿದೆ. ಸಿಡಿದೆದ್ದ ಶಾಸಕರ ಮನವೊಲಿಕೆಗೆ ಪ್ರಯತ್ನ ಮುಂದುವರಿದಿದೆ.

ಸಚಿವ ಸ್ಥಾನ ನೀಡಿ ಅಸಮಾಧಾನ ತಣಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಸಂಪುಟ ಪುನಾಃರಚನೆ? ಆಗುವ ಸಾಧ್ಯತೆ ಕೇಳಿಬರುತ್ತಿದೆ. ಕೆಲವು ಹಾಲಿ ಸಚಿವರಿಗೆ ಕೊಕ್ ಸಾಧ್ಯತೆಇದೆ. ಪುಟ್ಟರಂಗ ಶೆಟ್ಟಿ, ವೆಂಕಟರಮಣಪ್ಪ, ಜಯಮಾಲಾ, ಕೃಷ್ಣಭೈರೇಗೌಡ, ಎಂ.ಸಿ.ಮನಗೂಳಿ, ಶ್ರೀನಿವಾಸ್, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ ಕೈಬಿಡುವ ಸಾಧ್ಯತೆ ಕಂಡುಬರುತ್ತಿದೆ.

ಇವರ ಸ್ಥಾನಗಳನ್ನ ಅತೃಪ್ತರಿಗೆ ನೀಡಲು ಚಿಂತನೆ ನಡೆಯುತ್ತಿದೆ. ರಮೇಶ್, ನಾಗೇಂದ್ರ, ಭೀಮಾನಾಯ್ಕ, ಭದ್ರಾವತಿ ಸಂಗಮೇಶ್, ರಾಜಾ ವೆಂಕಟಪ್ಪ ನಾಯ್ಕ, ಅಖಂಡ ಶ್ರೀನಿವಾಸ್ ಮೂರ್ತಿಗೆ ನೀಡಲು ಚಿಂತನೆ ನಡೆಯುತ್ತಿದೆ.

ಈ ನಡುವೆ ಅಸಮಾಧಾನಗೊಂಡಿರುವ ಹೊರಟ್ಟಿಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಹೆಚ್.ಕೆ.ಕುಮಾರಸ್ವಾಮಿ,ಅನ್ನದಾನಿಗೂ ಸಚಿವ ಸ್ಥಾನದ ಭಾಗ್ಯ ಸಿಗುತ್ತಾ ಎನ್ನುವ ಪ್ರಶ್ನೆ ಕೇಳಿಬರಲಾರಂಭಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಬ್ಬರ ಹೊಡೆದಾಟ; 9 ಜನರ ಬಂಧನ