Select Your Language

Notifications

webdunia
webdunia
webdunia
webdunia

ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರ ಪಣ

ಮೈತ್ರಿ ಸರಕಾರ
ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಪಣತೊಟ್ಟಿದ್ದಾರೆ.  

ಮೈತ್ರಿ ಸರಕಾರ ಅಲುಗಾಡುತ್ತಿದೆ. ಆದ್ರೆ ರಾಜೀನಾಮೆಗೆ ಸಿದ್ಧರಾಗಿರುವ 12 ಕ್ಕೂ ಹೆಚ್ಚು ಶಾಸಕರ ನಡೆ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ನ 8, ಜೆಡಿಎಸ್ ನ ನಾಲ್ವರು ರಾಜೀನಾಮೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹರಿದಾಡಲಾರಂಭಿಸಿವೆ.
ಬಿಜೆಪಿ ನಾಯಕರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಶಾಸಕರು ಎನ್ನಲಾಗಿದೆ.

ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದೆ. ಈ ಹಿನ್ನೆಲೆ ತಮ್ಮ ರಾಜೀನಾಮೆ ನಿರ್ಧಾರ ಗಟ್ಟಿ ಮಾಡಿಕೊಂಡಿದ್ದಾರೆ ಹಲವು ಶಾಸಕರು ಎನ್ನಲಾಗುತ್ತಿದೆ.

ಕೇಂದ್ರದಲ್ಲಿ ಸರ್ಕಾರ ರಚನೆ ಬಳಿಕ ರಾಜ್ಯ ರಾಜಕಾರಣದಲ್ಲಿ ಕಂಪನ ಉಂಟಾಗಲಿದೆ. ಈ ಹಿಂದೆಯೇ ರಾಜೀನಾಮೆ ತೀರ್ಮಾನ ಪ್ರಕಟಿಸಿದ್ದಾರೆ ರಮೇಶ್ ಜಾರಕಿಹೊಳಿ. ಫಲಿತಾಂಶದ ಬಳಿಕ ರಾಜೀನಾಮೆಗೆ ಸಿದ್ಧವಾಗಿದ್ದಾರೆ ರಮೇಶ್ ಜಾರಕಿಹೊಳಿ. ಬಿಜೆಪಿ ನಾಯಕರ ಸಂದೇಶಕ್ಕೆ ಕಾಯುತ್ತಿದ್ದಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಮೋಹನ್ ಲಾಲ್ ಗೆ ಮರೆಯದೇ ಥ್ಯಾಂಕ್ಸ್ ಹೇಳಿದ ಪ್ರಧಾನಿ ಮೋದಿ