Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರ ಇಂದೇ ಪತನ?; ಅತೃಪ್ತ ಶಾಸಕರಿಂದ ಯಡಿಯೂರಪ್ಪಗೆ ಕರೆ

ಮೈತ್ರಿ ಸರಕಾರ ಇಂದೇ ಪತನ?; ಅತೃಪ್ತ ಶಾಸಕರಿಂದ ಯಡಿಯೂರಪ್ಪಗೆ ಕರೆ
ಬೆಂಗಳೂರು , ಗುರುವಾರ, 23 ಮೇ 2019 (10:41 IST)
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಹಾಗೂ ಇನ್ನೂ ಮತ ಎಣಿಕೆ ನಡೆದಿರುವಾಗಲೇ ಕೆಲವು ಅತೃಪ್ತ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕರೆ ಮಾಡುತ್ತಿದ್ದಾರೆ. ಇದರಿಂದಾಗಿ ಮೈತ್ರಿ ಸರಕಾರ ಪತನಗೊಳ್ಳುವ ಸಾಧ್ಯತೆಗಳು ದಟ್ಟವಾಗತೊಡಗಿವೆ.

ಏತನ್ಮಧ್ಯೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸೇರ್ಪಡೆಗೊಳ್ಳಲು ವೇದಿಕೆ ರೆಡಿಯಾಗುತ್ತಿದೆ ಎನ್ನುವ ಮಾತುಗಳಿಗೆ ಇಂಬು ನೀಡುವಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

webdunia
ಲೋಕಸಮರದ ಫಲಿತಾಂಶದ ದಿಕ್ಸೂಚಿ ಗೊತ್ತಾಗುತ್ತಿರುವಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸುಮಾರು 20ಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇದರಿಂದಾಗಿ ಆಪರೇಷನ ಕಮಲಕ್ಕೆ ಬಿಜೆಪಿ ಮತ್ತೆ  ಮುಂದಾಗಿದ್ದು,ಇದರಿಂದಾಗಿ ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬಿ.ಎಸ್.ಯಡಿಯೂರಪ್ಪ ಕೂಡ ಮೈತ್ರಿ ಸರಕಾರದ ವಿರುದ್ಧ ತಮ್ಮ ಕಾರ್ಯತಂತ್ರ ಹೆಣೆಯಲು ತೊಡಗಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆಗೆ ಭಾರೀ ಹಿನ್ನಡೆ; ಪ್ರತಾಪ ಸಿಂಹ ಮುನ್ನಡೆ