Select Your Language

Notifications

webdunia
webdunia
webdunia
webdunia

ಮಹಾತೀರ್ಪು ಯಾರತ್ತ? ರಾಜಕೀಯದಲ್ಲಿ ಮುಂದೆ ಏನೇನು, ಏನೆಲ್ಲಾ ಆಗುತ್ತೆ?

ಮಹಾತೀರ್ಪು ಯಾರತ್ತ? ರಾಜಕೀಯದಲ್ಲಿ ಮುಂದೆ ಏನೇನು, ಏನೆಲ್ಲಾ ಆಗುತ್ತೆ?
ಬೆಂಗಳೂರು , ಗುರುವಾರ, 23 ಮೇ 2019 (08:50 IST)
ಲೋಕಸಭೆ ಚುನಾವಣೆ ಮತಎಣಿಕೆ ನಡೆಯುತ್ತಿದೆ. ಇನ್ನೊಂದೆಡೆ ತನ್ನದೇ ಆದ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಫಲಿತಾಂಶ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಏನೇನು ನಡೆಯುತ್ತದೆ ಗೊತ್ತಾ?

ರಾಜ್ಯದಲ್ಲಿ 20ಕ್ಕಿಂತ ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ ಮೈತ್ರಿ ಸರಕಾರ ಪತನಕ್ಕೆ ಯತ್ನ ತೀವ್ರಗೊಳಿಸಹುದು.

ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ನೀಡಬಹುದು; ಆಪರೇಷನ್ ಕಮಲ ಮತ್ತೆ ಮುನ್ನಲೆಗೆ ಬರಬಲ್ಲದು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ 13 ಸಂಖ್ಯೆ ದಾಟಿದರೆ ಸಮ್ಮಿಶ್ರ ಸ್ವಲ್ಪಮಟ್ಟಿಗೆ ಸೇಫ್.

ಕೈ-ತೆನೆಯ ಪ್ರಮುಖ ಮುಖಂಡರು ಸೋತಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳಬಹುದು.

ಮೈಸೂರು ಗೆದ್ದು, ಮಂಡ್ಯ-ತುಮಕೂರಿನಲ್ಲಿ ಸೋತರೆ ಸಿದ್ದರಾಮಯ್ಯ ಬಣದ ವಿರುದ್ಧ ದಳ ನಾಯಕರು ಸಮರ ನಡೆಸಬಹುದು.

ಮಂಡ್ಯ, ತುಮಕೂರಿನಲ್ಲಿ ಗೆದ್ದು, ಮೈಸೂರು-ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋತರೆ ಕೈ ನಾಯಕರು ತೆನೆ ಪಕ್ಷದ ಮುಖಂಡರ ವಿರುದ್ಧ ಸಿಡಿದೇಳಬಹುದು.

ಇನ್ನು ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕುಂದಗೋಳ, ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದರೂ ಮೈತ್ರಿ ಸರಕಾರಕ್ಕೆ ಸವಾಲು ಎದುರಾಗೋದು ಪಕ್ಕಾ.

 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆ 2019: ಮಂಡ್ಯದಲ್ಲಿ ನಿಖಿಲ್ ಮುನ್ನಡೆ, ಅಮೇಥಿಯಲ್ಲಿ ರಾಹುಲ್ ಗೆ ಹಿನ್ನಡೆ