Publish Date: Sat, 25 May 2019 (10:12 IST)
Updated Date: Sat, 25 May 2019 (10:14 IST)
ನವದೆಹಲಿ: ಎರಡನೇ ಬಾರಿಗೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿ ಮೋದಿಗೆ ಹಲವು ಸಿನಿ ದಿಗ್ಗಜರು ವಿಶ್ ಮಾಡಿದ್ದರು.
ಆದರೆ ಅವರೆಲ್ಲರ ಹೊರತು ಪ್ರಧಾನಿ ಮೋದಿ ಈ ನಟನಿಗೆ ಮರೆಯದೇ ಧನ್ಯವಾದ ಸಲ್ಲಿಸಿದ್ದಾರೆ. ಅವರು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್. ಮೋಹನ್ ಲಾಲ್ ಹಿಂದೊಮ್ಮೆ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾಗ ಅವರು ಬಿಜೆಪಿ ಸೇರುತ್ತಾರೆ ಎಂದು ವದಂತಿ ಹಬ್ಬಿತ್ತು. ಆದರೆ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎಂದು ಮೋಹನ್ ಲಾಲ್ ಸ್ಪಷ್ಟಪಡಿಸಿದ್ದರು.
ಇದೀಗ ಮತ್ತೆ ಅಧಿಕಾರಕ್ಕೇರಿರುವುದಕ್ಕೆ ಮೋಹನ್ ಲಾಲ್ ಟ್ವಿಟರ್ ಮುಖಾಂತರ ‘ಗೌರವಯುತ ನರೇಂದ್ರ ಮೋದಿಜೀ ನಿಮಗೆ ಅಭಿನಂದನೆಗಳು’ ಎಂದು ವಿಶ್ ಮಾಡಿದ್ದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ‘ಧನ್ಯವಾದಗಳು ಮೋಹನ್ ಲಾಲ್ ಜೀ’ ಎಂದಿದ್ದಾರೆ.