Publish Date: Sat, 25 May 2019 (08:02 IST)
Updated Date: Sat, 25 May 2019 (08:04 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೇರಿದ ಪ್ರಧಾನಿ ಮೋದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ತೆರಳಿರುವ ಕೊಹ್ಲಿ ಕೊಂಚ ತಡವಾಗಿ ಚುನಾವಣೆ ಬಗ್ಗೆ ಟ್ವೀಟ್ ಮಾಡಿದರೂ ಪ್ರಧಾನಿ ಮೋದಿಗೆ ವಿಶೇಷ ಅಭಿನಂದನೆ ಸಲ್ಲಿಸುವುದು ಮರೆಯಲಿಲ್ಲ.
ನಿಮ್ಮ ನಾಯಕತ್ವದಲ್ಲಿ ಭಾರತ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ವಿವಾಹ ಆರತಕ್ಷತೆಗೂ ಪ್ರಧಾನಿ ಮೋದಿಗೆ ವಿಶೇಷ ಆಹ್ವಾನವಿತ್ತಿದ್ದರು. ಕೊಹ್ಲಿ ಆಹ್ವಾನ ಸ್ವೀಕರಿಸಿ ಪ್ರಧಾನಿ ಮೋದಿಗೂ ಆರತಕ್ಷತೆಗೆ ಆಗಮಿಸಿ ಹರಸಿದ್ದರು. ಆಗಾಗ ಸೋಷಿಯಲ್ ಮೀಡಿಯಾ ಅಭಿಯಾನಗಳಲ್ಲಿ ಪ್ರಧಾನಿ ಮೋದಿ ಕೊಹ್ಲಿ ಹೆಸರು ಉಲ್ಲೇಖಿಸುವುದನ್ನು ಮರೆಯುವುದಿಲ್ಲ. ಇದೇ ಬಾಂಧವ್ಯದಿಂದಲೇ ಕೊಹ್ಲಿ ಸ್ಪೆಷಲ್ಲಾಗಿ ವಿಶ್ ಮಾಡಿದ್ದಾರೆ.