Select Your Language

Notifications

webdunia
webdunia
webdunia
webdunia

ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಹೊರತಾಗಿ ಟೀಂ ಇಂಡಿಯಾದ ಕೀ ಆಟಗಾರರು ಇವರು

ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಹೊರತಾಗಿ ಟೀಂ ಇಂಡಿಯಾದ ಕೀ ಆಟಗಾರರು ಇವರು
ಮುಂಬೈ , ಶುಕ್ರವಾರ, 24 ಮೇ 2019 (07:47 IST)

ಮುಂಬೈ: ವಿಶ್ವಕಪ್ ಕ್ರಿಕೆಟ್ ಆಡಲು ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದೆ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದರೆ ಕೊಹ್ಲಿ ಹೊರತಾಗಿ ಈ ಕೀ ಆಟಗಾರರು ಮುಖ್ಯವಾಗುತ್ತಾರೆ. ಅವರು ಯಾರೆಲ್ಲಾ ನೋಡೋಣ.

ರೋಹಿತ್ ಶರ್ಮಾ

ಹಿಟ್ ಮ್ಯಾನ್ ಆರಂಭದಲ್ಲೇ ಸಿಡಿದರೆ ಭಾರತ ದೊಡ್ಡ ಸ್ಕೋರ್ ಕಲೆ ಹಾಕಬಹುದು. ರೋಹಿತ್ ದೊಡ್ಡ ಇನಿಂಗ್ಸ್ ಕಟ್ಟಿದ ಕ್ಷಮತೆ ಮತ್ತು ರನ್ ಗತಿಯನ್ನೂ ಹೆಚ್ಚಿಸುವ ಕಲೆ ಹೊಂದಿದ್ದಾರೆ. ಹೀಗಾಗಿ ಅವರು ದೊಡ್ಡ ಮೊತ್ತದ ಚೇಸಿಂಗ್ ಮಾಡುವಾಗ ಕೊಹ್ಲಿಯಷ್ಟೇ ಪ್ರಮುಖ ಆಟಗಾರ.

 

ಧೋನಿ

ಧೋನಿ ಟೀಂ ಇಂಡಿಯಾದ ಮೆದುಳು ಎಂದರೂ ತಪ್ಪಾಗಲಾರದು. ವಿರಾಟ್ ಕೊಹ್ಲಿ ನಾಯಕರಾದರೂ ತಂಡದ ಲೆಕ್ಕಾಚಾರದ ವಿಚಾರದಲ್ಲಿ ಧೋನಿಯ ಜಾಣ್ಮೆಯೇ ಕೆಲಸ ಮಾಡುವುದು. ಹೀಗಾಗಿ ಬೌಲಿಂಗ್ ಸೆಲೆಕ್ಷನ್ ವಿಚಾರದಲ್ಲಿ ವಿಕೆಟ್ ಹಿಂದುಗಡೆ ತ್ವರಿತವಾಗಿ ಸ್ಟಂಪ್ ಔಟ್ ಮಾಡಿ ಎದುರಾಳಿಗೆ ತಕ್ಕ ಸಮಯದಲ್ಲೇ ಆಘಾತ ನೀಡಲು ಧೋನಿ ನಿಷ್ಣಾತರು.

 

ಹಾರ್ದಿಕ್ ಪಾಂಡ್ಯ

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸ್ಪೋಟಿಸಬಲ್ಲ ಆಟಗಾರ. ರನ್ ಚೇಸಿಂಗ್ ಸಂದರ್ಭದಲ್ಲಿ ರನ್ ಮತ್ತು ಬಾಲ್ ಗತಿ ಕಾಯ್ದುಕೊಳ್ಳಲು ಹಾರ್ದಿಕ್ ರ ನ್ಯಾಚುರಲ್ ಶೈಲಿಯ ಬ್ಯಾಟಿಂಗ್ ಅಗತ್ಯ. ಇಂಗ್ಲೆಂಡ್ ನಲ್ಲಿ ವೇಗದ ಬೌಲರ್ ಗಳಿಗೆ ಸಹಕಾರ ಕೊಡುವ ಪಿಚ್ ಇರುವುದರಿಂದ ಹಾರ್ದಿಕ್ ತಂಡಕ್ಕೆ ಉಪಯುಕ್ತ ಆಟಗಾರ.

 

ಜಸ್ಪ್ರೀತ್ ಬುಮ್ರಾ

ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಹೆಸರು ವಾಸಿಯಾಗಿರುವ ಬುಮ್ರಾ ಕೊನೆಯ ಓವರ್ ಗಳಲ್ಲಿ ರನ್ ಗತಿ ನಿಯಂತ್ರಿಸಿ ವಿಕೆಟ್ ಕೀಳಬಲ್ಲ ನಿಷ್ಣಾತ. ಬುಮ್ರಾ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರೆ ಸಣ್ಣ ಮೊತ್ತವಾದರೂ ಎದುರಾಳಿಯನ್ನು ನಿಯಂತ್ರಿಸಲು ಟೀಂ ಇಂಡಿಯಾಕ್ಕೆ ಅಸಾಧ್ಯವೇನಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್‌‌ಗೆ ಮುಂಚೆಯೇ ವಿರಾಟ್ ಕೊಹ್ಲಿ ನೃತ್ಯದ ವಿಡಿಯೋ ವೈರಲ್