ನಿವೃತ್ತಿ ಬಳಿಕ ಏನು ಮಾಡುತ್ತೇನೆಂಬ ಸೀಕ್ರೆಟ್ ಬಯಲು ಮಾಡಿದ ಧೋನಿ

ಮಂಗಳವಾರ, 21 ಮೇ 2019 (08:38 IST)
ರಾಂಚಿ: ಧೋನಿ ಟೀಂ ಇಂಡಿಯಾ ಕಂಡ ಅತ್ಯಂತ ಶ್ರೇಷ್ಠ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಈ ಪ್ರತಿಭಾವಂತ ಕ್ರಿಕೆಟಿಗ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ನಿವೃತ್ತಿ ಬಳಿಕ ಧೋನಿ ಏನು ಮಾಡಬಹುದು ಎಂಬ ಪ್ರಶ್ನೆಗೆ ಧೋನಿ ಉತ್ತರ ನೀಡಿದ್ದಾರೆ.


ಧೋನಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿವೃತ್ತಿ ಬಳಿಕ ತಾನು ಪೈಂಟಿಂಗ್ ನ್ನು ವೃತ್ತಿಯಾಗಿ ಸ್ವೀಕರಿಸುವುದಾಗು ಹೇಳಿ ಧೋನಿ ಅಚ್ಚರಿ ಮೂಡಿಸಿದ್ದಾರೆ. ಧೋನಿಗೆ ಪೈಂಟಿಂಗ್ ಮೇಲೆ ಇಷ್ಟೊಂದು ಆಸಕ್ತಿಯಿದೆ ಎಂದು ಯಾರಿಗೂ ಗೊತ್ತೇ ಇರಲಿಲ್ಲ. ಈಗ ಆ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

‘ನನ್ನ ಬಾಲ್ಯದಿಂದಲೂ ಕಲಾವಿದನಾಗಬೇಕು ಎಂದು ನನಗೆ ಆಸೆಯಿತ್ತು. ಆದರೆ ಅದು ನೆರವೇರಲೇ ಇಲ್ಲ. ಈಗ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಪೈಂಟಿಂಗ್ ನನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದೇನೆ’ ಎಂದು ಧೋನಿ ತಮ್ಮ ಕೆಲವು ಪೈಂಟಿಂಗ್ ಗಳನ್ನು ತೋರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ವಿಚಾರದಲ್ಲಿ ಅಮಿತಾಬ್ ಬಚ್ಚನ್ ರನ್ನೂ ಸೈಡ್ ಗೆ ಹಾಕಿದ ವಿರಾಟ್ ಕೊಹ್ಲಿ!