ಕೊನೆಗೂ ನಿವೃತ್ತಿಗೆ ಮನಸ್ಸು ಮಾಡಿದ ಯುವರಾಜ್ ಸಿಂಗ್

ಸೋಮವಾರ, 20 ಮೇ 2019 (07:58 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಹಲವರು ಕೇಳುತ್ತಲೇ ಇರುತ್ತಾರೆ. ಇದೀಗ ಸ್ವತಃ ಯುವಿ ಆ ಪ್ರಶ್ನೆಗೆ ಉತ್ತರ ಹೇಳಲಿದ್ದಾರೆ.


ಯುವರಾಜ್ ಸಿಂಗ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ. ಅತ್ತ ಐಪಿಎಲ್ ನಲ್ಲೂ ಕ್ಲಿಕ್ ಆಗುತ್ತಿಲ್ಲ. ಹೀಗಾಗಿ ಯುವಿ ನಿವೃತ್ತಿಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಯುವರಾಜ್ ಸಿಂಗ್ ಗೆ ವಿದೇಶೀ ಕ್ರಿಕೆಟ್ ಲೀಗ್ ಗಳಲ್ಲಿ ಆಡುವ ಅವಕಾಶಗಳು ಬರುತ್ತಿವೆ. ಹೀಗಾಗಿ ಈ ಲೀಗ್ ಗಳಲ್ಲಿ ಆಡಲು ಬಿಸಿಸಿಐ ಜತೆಗೆ ಮಾತುಕತೆ ನಡೆಸುತ್ತಿದ್ದು, ಒಪ್ಪಿಗೆ ಸಿಕ್ಕ ಬಳಿಕ ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಹೇಳಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹರ್ಭಜನ್ ಸಿಂಗ್ ವಿಶ್ವಕಪ್ ಸೆಮಿಫೈನಲಿಸ್ಟ್ ಲಿಸ್ಟ್ ನಲ್ಲಿ ಈ ಪ್ರಮುಖ ತಂಡದ ಹೆಸರೇ ಇಲ್ಲ!