Publish Date: Sun, 19 May 2019 (07:31 IST)
Updated Date: Sun, 19 May 2019 (07:32 IST)
ಮುಂಬೈ: ಐಪಿಎಲ್ ನಲ್ಲಿ ಗಾಯಗೊಂಡಿದ್ದರಿಂದ ಈ ಬಾರಿ ವಿಶ್ವಕಪ್ ಆಡುವುದೇ ಅನುಮಾನ ಎಂತಿದ್ದ ಆಲ್ ರೌಂಡರ್ ಕೇದಾರ್ ಜಾಧವ್ ಕೊನೆಗೂ ಫಿಟ್ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಜಾಧವ್ ಭುಜದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಮೇ 23 ರೊಳಗೆ ಫಿಟ್ ಆಗದೇ ಇದ್ದರೆ ಈ ಬಾರಿ ವಿಶ್ವಕಪ್ ನಿಂದ ಹೊರಹೋಗಬೇಕಾಗಿತ್ತು.
ಆದರೆ ತಕ್ಕ ಸಮಯದಲ್ಲೇ ಫಿಟ್ ಆಗಿರುವ ಜಾಧವ್ ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಫಿಸಿಯೋ ಜಾಧವ್ ಫಿಟ್ ನೆಸ್ ಪರೀಕ್ಷೆ ನಡೆಸಿ ಫಿಟ್ ಎಂದು ವರದಿ ನೀಡಿದ್ದಾರೆ. ಹೀಗಾಗಿ ಮೇ 22 ರಂದು ಟೀಂ ಇಂಡಿಯಾ ಜತೆಗೆ ಜಾಧವ್ ಲಂಡನ್ ವಿಮಾನವೇರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ