Publish Date: Sat, 18 May 2019 (08:13 IST)
Updated Date: Sat, 18 May 2019 (08:15 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಇತ್ತೀಚೆಗಷ್ಟೇ ಹಿಮಾಲಯ ಮೆನ್ ಕ್ರೀಂ ಉತ್ಪನ್ನಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದರು.
ಈ ಕಂಪನಿಯ ಹೊಸ ಜಾಹೀರಾತಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದು, ಅದೇ ವಿಚಾರಕ್ಕೆ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದ್ದಾರೆ.
ಈ ಜಾಹೀರಾತಿನ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಕೊಹ್ಲಿ ಮೊಡವೆಯಂತಹ ಪದೇ ಪದೇ ಮರುಕಳಿಸುವ ಸಮಸ್ಯೆಯಿಂದ ಪುರುಷರು ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಬರೆದುಕೊಂಡಿದ್ದರು.
ಇದನ್ನು ನೋಡಿರುವ ವೀಕ್ಷಕರು ಕೆಲವರು ಇಂತಹ ಜಾಹೀರಾತಿನಲ್ಲಿ ಯಾಕೆ ಕಾಣಿಸಿಕೊಳ್ಳುತ್ತೀರಿ ಎಂದು ಕೇಳಿದರೆ ಇನ್ನು ಕೆಲವರು ಇದು ಇಂಗ್ಲೆಂಡ್ ಜೋಸ್ ಬಟ್ಲರ್, ಸ್ಟೀವ್ ಸ್ಮಿತ್ ನಂತಹವರಿಗೆ ತಕ್ಕುದಾದ ಜಾಹೀರಾತು ಎಂದು ಟ್ರೋಲ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ