ವಿರಾಟ್ ಕೊಹ್ಲಿ ಸ್ವಾತಂತ್ರ್ಯ ನೀಡಿದ್ದಕ್ಕೇ ನಾನು ಹೀಗಿದ್ದೇನೆ ಎಂದ ಕುಲದೀಪ್ ಯಾದವ್

ಶುಕ್ರವಾರ, 17 ಮೇ 2019 (08:25 IST)
ಮುಂಬೈ: ಧೋನಿ ಬಗ್ಗೆ ತಮಾಷೆಯ ಕಾಮೆಂಟ್ ಮಾಡಿ ವಿವಾದಕ್ಕೀಡಾದ ಕುಲದೀಪ್ ಯಾದವ್ ಇದೀಗ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ.


ನಾಯಕ ಕೊಹ್ಲಿ ನನಗೆ ಬೌಲಿಂಗ್ ಮಾಡುವಾಗ ಸ್ವಾತಂತ್ರ್ಯ ನೀಡಿದ್ದಕ್ಕೇ ನನಗೆ ಇಷ್ಟು ಯಶಸ್ಸು ಸಿಕ್ಕಿದೆ ಎಂದು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.

‘ಯಾವಾಗಲೂ ನಿಮ್ಮನ್ನು ಬೆಂಬಲಿಸುವ ನಾಯಕ ಬೇಕು. ಒಂದು ವೇಳೆ ಕೊಹ್ಲಿ ನನಗೆ ಇಷ್ಟು ಸ್ವಾತಂತ್ರ್ಯ ನೀಡದೇ ಇದ್ದಿದ್ದರೆ ನಾನು ಇಷ್ಟು ಯಶಸ್ಸು ಗಳಿಸಲು ಸಾಧ್ಯ ಎಂದು ನಿಮಗನಿಸುತ್ತದೆಯೇ? ಖಂಡಿತಾ ಇಲ್ಲ. ನನ್ನ ಯಶಸ್ಸಿಗೆ ಇದುವೇ ಮುಖ್ಯ ಕಾರಣ’ ಎಂದು ಕುಲದೀಪ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿವಾದವಾಗುತ್ತಿದ್ದಂತೆ ಧೋನಿ ಬಗ್ಗೆ ಕಾಮೆಂಟ್ ಗೆ ಸ್ಪಷ್ಟನೆ ನೀಡಿದ ಕುಲದೀಪ್ ಯಾದವ್