Publish Date: Fri, 17 May 2019 (08:15 IST)
Updated Date: Fri, 17 May 2019 (08:17 IST)
ಮುಂಬೈ: ಧೋನಿ ಮೈದಾನದಲ್ಲಿ ನೀಡುವ ಟಿಪ್ಸ್ ಹಲವು ಬಾರಿ ಕೈಕೊಡುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಟೀಂ ಇಂಡಿಯಾ ಯುವ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಧೋನಿ ಬಗ್ಗೆ ಈ ರೀತಿ ಜೋಕ್ ಮಾಡಿ ಕುಲದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದು ವಿವಾದವಾಗುತ್ತಿದ್ದಂತೇ ಇದೀಗ ಕುಲದೀಪ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
‘ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನಾನು ಇಂತಹ ಹೇಳಿಕೆಯನ್ನು ನೀಡಿಯೇ ಇಲ್ಲ. ಕೆಲವರಿಗೆ ತಪ್ಪು ಹುಡುಕುವುದೇ ಕೆಲಸವಾಗಿದೆ. ಧೋನಿ ನೀಡುವ ಟಿಪ್ಸ್ ನನಗೆ ಅಮೂಲ್ಯ. ಧೋನಿ ಹಿರಿಯ ಆಟಗಾರರು. ಅವರ ಸಲಹೆ ನನಗೆ ಮಾತ್ರವಲ್ಲ, ತಂಡಕ್ಕೇ ಅಮೂಲ್ಯವಾದುದು’ ಎಂದು ಕುಲದೀಪ್ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ