Select Your Language

Notifications

webdunia
webdunia
webdunia
webdunia

ಎಲ್ಲಾ ಬ್ಯಾಟ್ಸ್ ಮನ್ ಗಳೂ ಶೂನ್ಯ! ಟೀಂ ನಾಲ್ಕೇ ರನ್ ಗೆ ಆಲೌಟ್!

ಎಲ್ಲಾ ಬ್ಯಾಟ್ಸ್ ಮನ್ ಗಳೂ ಶೂನ್ಯ! ಟೀಂ ನಾಲ್ಕೇ ರನ್ ಗೆ ಆಲೌಟ್!
ವಯನಾಡು , ಶುಕ್ರವಾರ, 17 ಮೇ 2019 (09:43 IST)
ವಯನಾಡು: ಕ್ರಿಕೆಟ್ ಫನ್ನಿ ಗೇಮ್ ಎಂಬ ಮಾತಿದೆ. ಆದರೆ ಕೇರಳದಲ್ಲಿ ನಡೆದ ಮಹಿಳೆಯರ ಪಂದ್ಯವೊಂದರಲ್ಲಿ ಅದು ಅಕ್ಷರಶಃ ನಿಜವಾಗಿದೆ.


ಕಾಸರಗೋಡು ಅಂಡರ್ 19 ಮತ್ತು ವಯನಾಡು ತಂಡದ ನಡುವೆ ನಡೆದ ಅಂತರ್ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಸರಗೋಡು ತಂಡ ಕೇವಲ 4 ರನ್ ಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಾಸರಗೋಡು ತಂಡದ ಎಲ್ಲಾ ಬ್ಯಾಟರ್ ಗಳೂ ಶೂನ್ಯ ಸುತ್ತಿ ಪೆವಿಲಿಯನ್ ಮರಳಿದ್ದಾರೆ. ತಂಡಕ್ಕೆ ಬಂದ ನಾಲ್ಕು ರನ್ ಗಳು ಇತರ ರನ್ ರೂಪದಲ್ಲಿ ಬಂದಿದ್ದಾಗಿತ್ತು. ವಿಶೇಷವೆಂದರೆ ಎಲ್ಲಾ ಬ್ಯಾಟ್ಸ್ ಮನ್ ಗಳೂ ಬೌಲ್ಡ್ ಔಟ್ ಆಗಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ವಿನೂತನ ದಾಖಲೆಯಾಯಿತು. ಫಲಿತಾಂಶ ಕೇಳಬೇಕಿಲ್ಲ ತಾನೇ? ಸಹಜವಾಗಿಯೇ ವಯನಾಡು ಮೊದಲ ಓವರ್ ನಲ್ಲಿಯೇ ಐದು ರನ್ ಗಳನ್ನು ವಿಕೆಟ್ ನಷ್ಟವಿಲ್ಲದೇ ಚೇಸ್ ಮಾಡಿ ಗೆದ್ದುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಸವಾಲೆಸೆಯುವ ವೇಗಿಯನ್ನು ಕೊನೆಗೂ ವಿಶ್ವಕಪ್ ಗೆ ಆಯ್ಕೆ ಮಾಡಿದ ಪಾಕ್