ಹೊಸ ಇತಿಹಾಸ ಬರೆಯಲಿರುವ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್

ಶುಕ್ರವಾರ, 17 ಮೇ 2019 (08:54 IST)
ನವದೆಹಲಿ: ಇರ್ಫಾನ್ ಪಠಾಣ್ ಎಂಬ ಟೀಂ ಇಂಡಿಯಾ ವೇಗಿಯನ್ನು ಜನ ಈಗ ಬಹುಶಃ ಮರೆತೇಬಿಟ್ಟಿರುತ್ತಾರೆ. ಆದರೆ ಈಗ ಪಠಾಣ್ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.


ಭಾರತೀಯ ಕ್ರಿಕೆಟಿಗರು ಇದುವರೆಗೆ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಆಡಿದ ಉದಾಹರಣೆಯಿಲ್ಲ. ಆದರೆ ಟೀಂ ಇಂಡಿಯಾ ವೇಗಿ ಇರ್ಫಾನ್ ಇದೀಗ ಕೆರೆಬಿಯನ್ ಕ್ರಿಕೆಟ್ ಲೀಗ್ (ಸಿಸಿಎಲ್) ಆಟಗಾರರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾರೆ.

ಒಂದು ವೇಳೆ ಇರ್ಫಾನ್ ರನ್ನು ಯಾವುದಾದರೂ ತಂಡ ಖರೀದಿ ಮಾಡಿದರೆ ವಿದೇಶೀ ಲೀಗ್ ನಲ್ಲಿ ಹರಾಜಾದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ. ಆದರೆ ಬಿಸಿಸಿಐನಿಂದ ಇದುವರೆಗೆ ಒಪ್ಪಿಗೆ ಪಡೆಯಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇದಾರ್ ಜಾಧವ್ ಸ್ಥಾನಕ್ಕೆ ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಬಹುದಾದ ಆಟಗಾರ ಯಾರು ಗೊತ್ತೇ?