ಕೇದಾರ್ ಜಾಧವ್ ಸ್ಥಾನಕ್ಕೆ ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಬಹುದಾದ ಆಟಗಾರ ಯಾರು ಗೊತ್ತೇ?

ಶುಕ್ರವಾರ, 17 ಮೇ 2019 (08:29 IST)
ಮುಂಬೈ: ಐಪಿಎಲ್ ನಲ್ಲಿ ಭುಜದ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಆಲ್ ರೌಂಡರ್ ಕೇದಾರ್ ಜಾಧವ್ ಇದೀಗ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.


ಒಂದು ವೇಳೆ ಜಾಧವ್ ವಿಶ್ವಕಪ್ ತಂಡದ ಜತೆಗೆ ಪ್ರಯಾಣಿಸಲು ಅಸಾಧ್ಯವಾದರೆ ಭಾರತ ತಂಡಕ್ಕೆ ಹೊಸ ಆಟಗಾರ ಸೇರ್ಪಡೆಯಾಗಬಹುದು. ಆ ಅದೃಷ್ಟ ಯಾರಿಗೆ ಒಲಿಯಬಹುದು ಎಂಬುದು ಇದೀಗ ಪ್ರಶ್ನೆಯಾಗಿದೆ.

ಮೂಲಗಳ ಪ್ರಕಾರ ಜಾಧವ್ ಸ್ಥಾನಕ್ಕೆ ಅಂಬಟಿ ರಾಯುಡುಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂಬಟಿ ರಾಯುಡು ಮಧ್ಯಮ ಕ್ರಮಾಂಕಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಯಿತ್ತು. ಆದರೆ ಕೊನೆಗಳಿಗೆಯಲ್ಲಿ ಸ್ಥಾನವಂಚಿತರಾಗಿದ್ದು ರಾಯುಡುಗೆ ತೀವ್ರ ಬೇಸರವನ್ನುಂಟುಮಾಡಿತ್ತು. ಇದೀಗ ಮತ್ತೆ ಅದೃಷ್ಟ ಖುಲಾಯಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ಸ್ವಾತಂತ್ರ್ಯ ನೀಡಿದ್ದಕ್ಕೇ ನಾನು ಹೀಗಿದ್ದೇನೆ ಎಂದ ಕುಲದೀಪ್ ಯಾದವ್