ವಿರಾಟ್ ಕೊಹ್ಲಿಗೆ ಸವಾಲೆಸೆಯುವ ವೇಗಿಯನ್ನು ಕೊನೆಗೂ ವಿಶ್ವಕಪ್ ಗೆ ಆಯ್ಕೆ ಮಾಡಿದ ಪಾಕ್

ಶುಕ್ರವಾರ, 17 ಮೇ 2019 (09:21 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಕೆಲವೇ ಕೆಲವು ಬೌಲರ್ ಗಳಲ್ಲಿ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಕೂಡಾ ಒಬ್ಬರು.


ಕಳೆದ ಚಾಂಪಿಯನ್ ಟ್ರೋಫಿ ಇರಲಿ, ಯಾವುದೇ ಪಂದ್ಯವಾಗಲಿ ಪಾಕ್ ವಿರುದ್ಧ ಆಡುವಾಗ ಕೊಹ್ಲಿಗೆ ಸವಾಲಾಗುವುದು ಅಮೀರ್ ಬೌಲಿಂಗ್ ಎದುರಿಸುವುದೇ. ಆದರೆ ಅಮೀರ್ ಪಾಕಿಸ್ತಾನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುತ್ತಾನೋ ಇಲ್ಲವೋ ಎಂಬ ಅನುಮಾನವಿತ್ತು.

ಆ ಅನುಮಾನ ಇದೀಗ ಪರಿಹಾರವಾಗಿದೆ. ಅಮೀರ್ ನನ್ನು ಪಾಕ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಜೂನ್ 16 ರಂದು ಭಾರತ-ಪಾಕ್ ಪಂದ್ಯ ನಡೆಯಲಿದ್ದು, ವಿರಾಟ್ ಗೆ ಸವಾಲೆಯೆಸಲು ಅಮೀರ್ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೊಸ ಇತಿಹಾಸ ಬರೆಯಲಿರುವ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್