Publish Date: Sat, 18 May 2019 (09:05 IST)
Updated Date: Sat, 18 May 2019 (09:08 IST)
ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕ್ರಿಕೆಟ್ ಯಶಸ್ಸಿನ ಹಿಂದೆ ಪತ್ನಿ ಆಯೆಷಾ ಕೊಡುಗೆಯೂ ಇದೆ. ಆಯೆಷಾ ಪ್ರೋತ್ಸಾಹದ ಬಗ್ಗೆ ಧವನ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಆಗಾಗ ಆಯೆಷಾ ಜತೆ ತಮ್ಮ ಆಟದ ಬಗ್ಗೆ ಚರ್ಚೆ ನಡೆಸುತ್ತಾರಂತೆ ಧವನ್. ತಾವು ಕ್ರಿಕೆಟ್ ನಲ್ಲಿ ಏನಾದರೂ ತಪ್ಪು ಮಾಡುತ್ತಿದ್ದರೆ, ತಮ್ಮ ಆಟದಲ್ಲಿ ತಪ್ಪಾಗುತ್ತಿದ್ದರೆ ಆಯೆಷಾ ಜತೆ ಚರ್ಚಿಸುತ್ತಾರಂತೆ. ಆಯೆಷಾ ಕೂಡಾ ಅದಕ್ಕೆ ತಮಗೆ ಗೊತ್ತಿರುವ ಪರಿಹಾರ ಹೇಳುತ್ತಾರಂತೆ.
‘ಕೆಲವೊಮ್ಮೆ ಅವಳು ನನ್ನ ಆಟದ ಬಗ್ಗೆ ಹೇಳುತ್ತಾ ಎಷ್ಟು ಉದ್ವೇಗಕ್ಕೊಳಗಾಗುತ್ತಾಳೆ ಎಂದರೆ ನಾನೇ ಅವಳನ್ನು ಸಮಾಧಾನಿಸಬೇಕಾಗುತ್ತದೆ. ನನ್ನ ಕೋಚ್ ಕೂಡಾ ಇಷ್ಟು ಕೋಪ ಮಾಡಿಕೊಳ್ಳಲ್ಲ, ಸಮಾಧಾನ ಮಾಡಿಕೋ ಎಂದು ಆಯೆಷಾಗೆ ಹೇಳಬೇಕಾಗುತ್ತದೆ’ ಎಂದು ಧವನ್ ತಮಾಷೆಯಾಗಿಯೇ ಹೆಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ