ಕ್ರಿಕೆಟ್ ನಿಂದ ನಿವೃತ್ತಿ ಹೇಳಲು ನಿಜ ಕಾರಣ ಈಗ ಬಯಲು ಮಾಡಿದ ಎಬಿಡಿ ವಿಲಿಯರ್ಸ್

ಮಂಗಳವಾರ, 21 ಮೇ 2019 (08:28 IST)
ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಅಭಿಮಾನಿಗಳಿಗೆ ದ.ಆಫ್ರಿಕಾ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಬಗ್ಗೆ ಗೊತ್ತಿಲ್ಲದೇ ಇಲ್ಲ. ಈ ಪ್ರತಿಭಾವಂತ ಕ್ರಿಕೆಟಿಗ ತಮ್ಮ ರಾಷ್ಟ್ರೀಯ ತಂಡಕ್ಕೆ ಇದ್ದಕ್ಕಿದ್ದಂತೆ ವಿದಾಯ ಘೋಷಿಸಿದ್ದರ ಹಿಂದಿನ ರಹಸ್ಯವನ್ನು ಈಗ ಬಯಲು ಮಾಡಿದ್ದಾರೆ.

 

ಆಪ್ರಿಕಾದ ಈ ಸ್ಟಾರ್ ಬ್ಯಾಟ್ಸ್ ಮನ್ ಇದ್ದಕ್ಕಿದ್ದಂತೆ ಅಂತಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಾಗ ಎಲ್ಲರೂ ಅಚ್ಚರಿಪಟ್ಟಿದ್ದರು. ಆಗ ಎಬಿಡಿ ಏನೇನೋ ನೆಪ ಹೇಳಿರಬಹುದು. ಆದರೆ ಈಗ ನಿಜ ಕಾರಣ ಬಯಲು ಮಾಡಿದ್ದಾರೆ.

‘ನಾನು ಈ ವಿಶ್ವಕಪ್ ನಲ್ಲಿ ಆಡಬೇಕೆಂದು ಬಯಸಿದ್ದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ತಂಡದಲ್ಲಿ ನನ್ನದು ಬರುವ ಹೋಗುವ ಪಾತ್ರವಾಗಿತ್ತು. ನಾನು ಮೂಲೆಗುಂಪಾದೆ ಎನಿಸಲು ತೊಡಗಿತ್ತು. ಹೀಗಾಗಿ ಏನೂ ಬೇಡವೆಂದು ನಿವೃತ್ತಿ ಹೇಳುವ ನಿರ್ಧಾರ ಮಾಡಿದೆ’ ಎಂದು ಎಬಿಡಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆ ಸಂದೇಶ ನೀಡಿದ ದ.ಆಫ್ರಿಕಾ ವೇಗಿ ನಿಗಿಡಿ