ಈ ಸಮಯದಲ್ಲಿ ಊಟ ಮಾಡಲೇಬಾರದು!

ಮಂಗಳವಾರ, 21 ಮೇ 2019 (07:44 IST)
ಬೆಂಗಳೂರು: ತೂಕ ಇಳಿಕೆ ಮಾಡಲು ಇಂದಿನ ಜನ ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ತಾವು ಎಂತಹ ಆಹಾರ ಸೇವಿಸುತ್ತೇವೆ ಎನ್ನುವಷ್ಟೇ ಯಾವ ಹೊತ್ತಿನಲ್ಲಿ ಸೇವಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.


ಇಂದಿನ ಬ್ಯುಸಿ ಜಗತ್ತಿನಲ್ಲಿ ನಮ್ಮ ಮಧ್ಯಾಹ್ನದ ಊಟದ ಸಮಯ ಯಾವಾಗಲೋ ಆಗಿಬಿಡುತ್ತದೆ. ಕೆಲವೊಮ್ಮೆ ತೀರಾ ಲೇಟ್ ಆಗಿ ಅಂದರೆ ಅಪರಾಹ್ನದ ಬಳಿಕ ಊಟ ಮಾಡುವವರೂ ಇದ್ದಾರೆ. ಆದರೆ ಇದು ನಮ್ಮ ತೂಕ ಇಳಿಕೆ ಮಾಡುವ ಪ್ರಯತ್ನಕ್ಕೆ ತೀರಾ ವಿರುದ್ಧವಾಗಿದೆ.

ಅಧ್ಯಯನವೊಂದರ ಪ್ರಕಾರ ಮಧ್ಯಾಹ್ನ 3 ಗಂಟೆಯ ನಂತರ ಊಟ ಮಾಡುವುದರಿಂದ ನಮ್ಮ ತೂಕ  ಇಳಿಕೆಯಾಗದು. ಇದು ಊಟ ಮಾಡಲು ಅತ್ಯಂತ ಕೆಟ್ಟ ಸಮಯ. ಈ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ದೇಹದಲ್ಲಿ ಕೊಬ್ಬಿನಂಶ ಇಳಿಕೆ ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?