ಮದುವೆಯಾಗುವ ಹುಡುಗನಲ್ಲಿ ಇರಲೇಬೇಕಾದ ಈ ಮೂರು ಗುಣಗಳು

ಸೋಮವಾರ, 20 ಮೇ 2019 (12:53 IST)
ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ವಿಚಾರದಲ್ಲಿ ಹುಡುಗಿಯರಿಗೆ ಏನೇನೋ ಕನಸುಗಳು, ಕಲ್ಪನೆಗಳು ಇರುತ್ತವೆ. ಆದರೆ ಮದುವೆಯಾಗುವ ಹುಡುಗನಲ್ಲಿ ಈ ಮೂರು ಗುಣಗಳು ಇರಲೇಬೇಕು.

 

ಸಂಗಾತಿ ಬಗ್ಗೆ ಆತನಿಗೆ ಎಷ್ಟು ಕಾಳಜಿ ಇದೆ
ಮದುವೆ ಜೀವನದ ಬಗ್ಗೆ, ತನ್ನ ಸಂಗಾತಿಯಾಗುವವಳ ಬಗ್ಗೆ ತನ್ನದೇ ಆದ ಕಲ್ಪನೆ ಇದ್ದವರು ಮಾತ್ರ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬಲ್ಲ. ಯಾರದ್ದೋ ಒತ್ತಾಯಕ್ಕೆ ಮದುವೆಯಾಗುವ ಬದಲು ತನಗೇ ಮದುವೆ, ಸಂಗಾತಿ ಬೇಕು ಎನ್ನುವ ಲವ ಲವಿಕೆ ಆತನಲ್ಲಿರಬೇಕು.

ಹೆಣ್ಣಿನ ಬಗ್ಗೆ ಗೌರವ
ತನ್ನ ಅಮ್ಮನನ್ನು ಗೌರವಿಸುವ ಪುರುಷ ಹೆಂಡತಿಯನ್ನೂ ಗೌರವದಿಂದ ಕಾಣುತ್ತಾನೆ ಎನ್ನುತ್ತಾರೆ. ಹಾಗಿದ್ದರೂ ಮದುವೆಯಾಗುವ ಹುಡುಗ ಹೆಣ್ಣು ಮಕ್ಕಳನ್ನು ಹೇಗೆ ಗೌರವದಿಂದ ನಡೆಸಿಕೊಳ್ಳುತ್ತಾನೆ ಎನ್ನುವುದನ್ನು ಗಮನಿಸಲೇಬೇಕು.

ಜವಾಬ್ಧಾರಿ
ಗಂಡನಾಗುವುದೂ ಒಂದು ಜವಾಬ್ಧಾರಿ. ಅದನ್ನು ನಿಭಾಯಿಸುವ ಕ್ಷಮತೆ, ಜವಾಬ್ಧಾರಿಯುತ ನಡವಳಿಕೆ ಆತನಿಗಿದೆಯಾ ಎಂದು ಗಮನಿಸಿ. ಒಂದು ಸಂಸಾರವನ್ನು ನಿಭಾಯಿಸುವ, ಮುನ್ನಡೆಸುವ ಜಾಣತನ ಗಂಡಿಗೆ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಬೆನ್ನು ಸುಂದರವಾಗಿ, ಕೋಮಲವಾಗಿ ಕಾಣಬೇಕೆಂದರೆ ಈ ರೀತಿ ಮಾಡಿ