Select Your Language

Notifications

webdunia
webdunia
webdunia
webdunia

ನಿಮ್ಮ ವಿಕೆಟ್ ನನ್ನ ಟಾರ್ಗೆಟ್ ಎಂದ ಇಂಗ್ಲೆಂಡ್ ವೇಗಿಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರವೇನು ಗೊತ್ತಾ?

ನಿಮ್ಮ ವಿಕೆಟ್ ನನ್ನ ಟಾರ್ಗೆಟ್ ಎಂದ ಇಂಗ್ಲೆಂಡ್ ವೇಗಿಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರವೇನು ಗೊತ್ತಾ?
ಲಂಡನ್ , ಶನಿವಾರ, 25 ಮೇ 2019 (07:34 IST)
ಲಂಡನ್: ವಿಶ್ವಕಪ್ ಆಡಲು ಇಂಗ್ಲೆಂಡ್ ಗೆ ಬಂದಿಳಿದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಬೌಲರ್ ಗಳ ಟಾರ್ಗೆಟ್ ಆಗಿದ್ದಾರೆ.


ಕೊಹ್ಲಿ ವಿಕೆಟ್ ಉಡಾಯಿಸುವುದೇ ನನ್ನ ಗುರಿ ಎಂದು ಇಂಗ್ಲೆಂಡ್ ಆಲ್ ರೌಂಡರ್ ಜೋಫ್ರಾ ಆರ್ಚರ್ ಹೇಳಿಕೆ ನೀಡಿದ್ದಾರೆ. ಜೋಫ್ರಾ ಹೇಳಿಕೆ ಬಗ್ಗೆ ಮಾಧ್ಯಮಗಳು ಕೊಹ್ಲಿಯನ್ನು ಪ್ರಶ್ನಿಸಿದಾಗ ಕೊಹ್ಲಿ ಕೂಲ್ ಆಗಿಯೇ ಉತ್ತರಿಸಿದ್ದಾರೆ.

‘ನನ್ನ ವಿಕೆಟ್ ಬೌಲರ್ ಗಳ ಟಾರ್ಗೆಟ್ ಆಗಿದೆ ಎಂದರೆ ಅದು ನನಗೆ ಗೌರವದ ವಿಷಯ. ಇದು ನನಗೆ ಮಾತ್ರವಲ್ಲ, ಇಂಗ್ಲೆಂಡ್ ನಾಯಕ ಮಾರ್ಗನ್ ಗೂ ಶುಭ ಸಂಕೇತ. ಇಂತಹ ಮಾತುಗಳಿಗೆಲ್ಲಾ ನಾನು ತಲೆಯೇ ಕೆಡಿಸಿಕೊಳ್ಳಲ್ಲ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸೆಕೆಂಡ್ ಇನಿಂಗ್ಸ್ ಗೆ ವೀರೇಂದ್ರ ಸೆಹ್ವಾಗ್ ಅಭಿನಂದನೆ