Select Your Language

Notifications

webdunia
webdunia
webdunia
webdunia

‘ಅತೃಪ್ತರಿಗೆ ಸಚಿವ ಸ್ಥಾನ; ಮತ್ತೊಂದು ಅಪಹಾಸ್ಯ’

‘ಅತೃಪ್ತರಿಗೆ ಸಚಿವ ಸ್ಥಾನ; ಮತ್ತೊಂದು ಅಪಹಾಸ್ಯ’
ಬೆಂಗಳೂರು , ಸೋಮವಾರ, 27 ಮೇ 2019 (16:21 IST)
ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ್ದ ಶ್ರೀನಿವಾಸ ಪ್ರಸಾದ್ ರನ್ನ  ಬಾಗಿಲ ಬಳಿಯೇ ಬಂದು ಶ್ರೀನಿವಾಸ ಪ್ರಸಾದ್ ರನ್ನು ಸ್ವಾಗತಿಸಿ ಮನೆಯೊಳಗೆ ಕರೆದೊಯ್ದರು ಯಡಿಯೂರಪ್ಪ.

ಬಿ.ಎಸ್. ಯಡಿಯೂರಪ್ಪ ಭೇಟಿ ಬಳಿಕ ಚಾಮರಾಜನಗರ ಲೋಕಸಭೆ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ‌ ದೂರವಾಣಿ ಮೂಲಕ ಬಿಎಸ್ ವೈಯವರನ್ನು ಮಾತನಾಡಿಸಿದ್ದೆ. ಇವಾಗ ಖುದ್ದು ಬಿಎಸ್ ವೈ ಭೇಟಿ ಮಾಡಿದೆ. ಅವ್ರ ನೇತೃತ್ವದಲ್ಲಿ ಚುನಾವಣೆಯಲ್ಲಿ ದಾಖಲೆ ಮಾಡಿದ್ದೇವೆ. ಕೇಂದ್ರದಲ್ಲಿ ಎರಡನೇ ಭಾರಿಗೆ ಸರ್ಕಾರ ರಚಿಸಿದ್ದೇವೆ ಎಂದರು.

ಸಂಸದರ ಸಭೆಯಲ್ಲಿ ಭಾಗವಹಿಸಿದ ಬಳಿಕ  ಬಂದು ಬಿಎಸ್ ವೈ ಭೇಟಿಯಾಗಿದ್ದೇನೆ. ರಾಜ್ಯದಲ್ಲಿಯೇ ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದಿರುವನು ನಾನು. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು ಜೊತೆಗೆ ಕಡಿಮೆ ಅಂತರದಲ್ಲಿ ಗೆಲ್ಲುತ್ತೇನೆ ಅಂತ ಅಂದುಕೊಂಡಿದ್ದೆ. ಕೇಂದ್ರದಲ್ಲಿ ಸಚಿವನಾಗುವ ಆಸೆ ಇಲ್ಲ. ಕೇಂದ್ರ ಸಚಿವ ಸ್ಥಾನ ನೀಡೋದು ಕೇಂದ್ರದ ಪರಮಾಧಿಕಾರಿ. ನಾನಾಗ್ಲೆ ಕೇಳಲ್ಲ ಅವ್ರಾಗ್ಲೇ ಕೇಂದ್ರ ಸಚಿವ ಸ್ಥಾನ ಕೊಟ್ರೆ ನಿಭಾಯಿಸುವೆ ಎಂದರು.

ನಂಜನಗೂಡು ಉಪಚುನಾವಣೆ ಸೋಲಿನ ಸೇಡನ್ನ ನನ್ನ ಜನರು ಈ ಮೂಲಕ ತೀರಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ರು. ಸಿದ್ದರಾಮಯ್ಯ ಚಾಮುಂಡೇಶ್ವರಿ ಯಲ್ಲಿ ಸೋತು ಸುಣ್ಣವಾಗಿ ಬದಾಮಿಗೆ ಓಡಿ ಹೋಗಿದ್ದಾರೆ. ದೋಸ್ತಿ ಅಂದ್ರೆ ಒಂದು ಅರ್ಥ ಇದೆ.  ಸರ್ಕಾರದಲ್ಲಿ ಸಮನ್ವಯ ಏನಾದ್ರು ಇದೆಯಾ? ಮೈತ್ರಿ ನಾಯಕರ ಹೇಳಿಕೆಗಳೇನ್ರಿ ಅವು? ಇಷ್ಟೆಲ್ಲಾ ಅವಾಂತರವಾಗಿ ಹೇಗೆ ಸರ್ಕಾರ ಮುಂದುವರೆಸ್ತಾರೆ ಅಂತ ಅವ್ರೆ ಪ್ರಶ್ನೆ ಹಾಕಿಕೊಳ್ಳಬೇಕು‌ ಎಂದರು. ಅತೃಪ್ತ ಶಾಸಕರಿಗೆ ಮಂತ್ರಿಸ್ಥಾನ ನೀಡುವ ವಿಚಾರವೇ ಇದು ಮತ್ತಷ್ಟು ಮೈಮೇಲೆ ಹಾಕಿಕೊಳ್ಳುವ ತಂತ್ರ ಎಂದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲಲು ಝೀರೋ ಟ್ರಾಫಿಕ್ ಕಾರಣ- ಡಿಸಿಎಂ ವಿರುದ್ಧ ಕಿಡಿಕಾರಿದ ಮಾಜಿ ಶಾಸಕ