Publish Date: Mon, 27 May 2019 (07:04 IST)
Updated Date: Mon, 27 May 2019 (07:07 IST)
ಬೆಂಗಳೂರು : ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು. ಅದೇರೀತಿ ಬಾಯಿ, ಹಲ್ಲು, ನಾಲಿಗೆ ಕೂಡ ಸ್ವಚ್ಚವಾಗಿರಬೇಕು. ನಾಲಿಗೆಯನ್ನು ಕ್ಲೀನ್ ಮಾಡಲು ಇಲ್ಲಿದೆ ಸುಲಭ ವಿಧಾನ.
ನಾಲಿಗೆ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಬ್ರೆಷ್ ನಿಂದ ತಿಕ್ಕಿ. ಒಂದು ವಾರಗಳ ಕಾಲ ಇದನ್ನು ನಿಯಮಿತವಾಗಿ ಮಾಡಿ. ಮೊಸರನ್ನು ನಾಲಿಗೆ ಹಚ್ಚಿ ತಿಕ್ಕುವುದರಿಂದ ನಾಲಿಗೆ ಸ್ವಚ್ಛವಾಗುತ್ತದೆ.
ಅರಿಶಿನಕ್ಕೆ ನಿಂಬೆ ರಸವನ್ನು ಮಿಕ್ಸ್ ಮಾಡಿ ನಾಲಿಗೆ ಮೇಲೆ ಹಾಕಿ ಬೆರಳಿನ ಸಹಾಯದಿಂದ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಿ. ಹಾಗೇ ಅರ್ಧ ಲೋಟ ನೀರಿಗೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 5-6 ಬಾರಿ ಹೀಗೆ ಮಾಡಿ.