Publish Date: Sun, 26 May 2019 (06:58 IST)
Updated Date: Sun, 26 May 2019 (06:59 IST)
ಬೆಂಗಳೂರು : ಕೂದಲಿಗೆ ಕಲರ್ ಮಾಡುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ಬೀಟ್ ರೂಟ್ ರಸ ಬಳಸಿ ಕೂದಲಿಗೆ ಕಲರ್ ಮಾಡಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.
ಬೀಟ್ ರೂಟ್ ಗಳನ್ನೂ ತುಂಡರಿಸುವ ಮೊದಲು ಚೆನ್ನಾಗಿ ತೊಳೆದು, ಅವುಗಳನ್ನು ಪೇಸ್ಟ್ ಮಾಡಿ ರಸವನ್ನು ಸೋಸಿ. ಈ ರಸಕ್ಕೆ ಕೆಲವು ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಆದರೆ ಕಂಡೀಷನರ್ ಅನ್ನು ಬಳಸದಿರಿ ,ಏಕೆಂದರೆ ಬೀಟ್ ರಸವು ಕೂದಲಿನ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ನಂತರ ಈ ಮಿಶ್ರಣವನ್ನು ಹಚ್ಚಿ ಕನಿಷ್ಟ 4ಗಂಟೆಗಳ ಕಾಲ ಇರಲು ಬಿಡಿ , ನಂತರ ತೊಳೆಯಿರಿ. ನಿಮ್ಮ ಕೂದಲನ್ನು ಒಣಗಿಸಿದ ನಂತರ, ಕೆಂಪು-ಕೆನ್ನೇರಳೆ ಬಣ್ಣವು ಹೊಳೆಯುತ್ತದೆ.