Publish Date: Mon, 27 May 2019 (08:57 IST)
Updated Date: Mon, 27 May 2019 (09:13 IST)
ಬೆಂಗಳೂರು: ಕಳೆದ ವರ್ಷ ನನ್ನ ಮದುವೆಯಾಯಿತು.ಮನೆಯವರೇ ನಿಶ್ಚಯಿಸಿದ ಮದುವೆ ಇದು. ಮದುವೆಯಾದ ಎರಡನೇ ದಿನಕ್ಕೆ ನನ್ನ ಗಂಡನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. 24 ಗಂಟೆಯಲ್ಲಿ ಒಂದು ನಿಮಿಷವೂ ನನ್ನ ಜತೆ ಮಾತನಾಡುತ್ತಿಲ್ಲ. ಹಾಗೇ ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವೂ ನಡೆದಿಲ್ಲ. ನಾನು ಸುಂದರವಾಗಿಲ್ಲ ಎಂಬುದೇ ಅವರು ನನ್ನ ಜತೆ ಬೆರೆಯದೇ ಇರುವುದಕ್ಕೆ ಕಾರಣವಂತೆ. ನನ್ನ ಅತ್ತೆಗೆ ಈ ವಿಷಯ ಗೊತ್ತಾಗಿ ನನ್ನ ಕೆಲಸ ಬಿಡಿಸಿ ಮನೆಯಲ್ಲಿಯೇ ಇರು ಎಂದು ಹೇಳಿದ್ದಾರೆ. ಇದರಿಂದ ನಾನು ತುಂಬಾ ಡಿಪ್ರೆಸ್ ಆಗಿದ್ದೇನೆ.
ನೀವು ಅತ್ಯಂತ ಸವಾಲಿನ ಸ್ಥಿತಿಯಲ್ಲಿ ಇದ್ದೀರಿ. ನೀವು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಗಂಡ ನಿಮ್ಮನ್ನು ಸ್ವೀಕರಿಸುತ್ತಿಲ್ಲ ಎಂಬುದು ತುಂಬಾ ನೋವನ್ನುಂಟು ಮಾಡುತ್ತದೆ ಎಂಬುದು ನನಗೆ ಅರ್ಥ ವಾಗುತ್ತದೆ.ಯಾರಿಗಾದರೂ ನೀವು ಸುಂದರವಾಗಿ ಕಂಡಿಲ್ಲವೆಂದರೆ ಅದು ಅವರ ಸಮಸ್ಯೆಯೇ ಹೊರತು ನಿಮ್ಮ ಸಮಸ್ಯೆ ಅಲ್ಲ, ನಿಮ್ಮ ಮನೆಯ ಸದಸ್ಯರ ಬಳಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಹಾಗೇ ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳಿ. ಗಂಡನ ಬಳಿ ಕುಳಿತು ಮಾತನಾಡುವುದಕ್ಕೆ ಪ್ರಯತ್ನಿಸಿ.