Select Your Language

Notifications

webdunia
webdunia
webdunia
webdunia

ಎಸ್ ಎಂ ಕೃಷ್ಣರನ್ನು ಭೇಟಿ ಮಾಡಿದ ಅತೃಪ್ತ ಕಾಂಗ್ರೆಸ್ ಶಾಸಕರು; ಸರ್ಕಾರಕ್ಕೆ ಕಾದಿದೆಯಾ ಗಂಡಾಂತರ?

ಎಸ್ ಎಂ ಕೃಷ್ಣರನ್ನು ಭೇಟಿ ಮಾಡಿದ ಅತೃಪ್ತ ಕಾಂಗ್ರೆಸ್ ಶಾಸಕರು; ಸರ್ಕಾರಕ್ಕೆ ಕಾದಿದೆಯಾ ಗಂಡಾಂತರ?
ಬೆಂಗಳೂರು , ಭಾನುವಾರ, 26 ಮೇ 2019 (15:32 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಉರುಳಿದೆ ಎಂಬ ಬಿಜೆಪಿ ಭವಿಷ್ಯ ವಾಣಿಗೆ ತಕ್ಕಂತೇ ಬೆಳವಣಿಗೆಗಳು ನಡೆಯುತ್ತಿದೆ.


ಕಾಂಗ್ರೆಸ್ ನ ಅತೃಪ್ತ ಶಾಸಕರು ಇಂದು ಹಿರಿಯ ಬಿಜೆಪಿ ನಾಯಕ ಎಸ್ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ರಾಜ್ಯ ಸರ್ಕಾರ ಉರುಳುವ ವಾರ್ತೆಗಳಿಗೆ ಪುಷ್ಠಿ ನೀಡಿದೆ.

ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಎಸ್ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ಕೂಡಾ ಸ್ಥಳದಲ್ಲಿದ್ದರು. ಆದರೆ ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತಷ್ಟೇ ಎಂದು ಮಾತು ತೇಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪರನ್ನು ಭೇಟಿಯಾದ ಸಂಸದೆ ಸುಮಲತಾ