Select Your Language

Notifications

webdunia
webdunia
webdunia
webdunia

ಬಿ.ಎಸ್.ಯಡಿಯೂರಪ್ಪಗೆ ಭಾರೀ ಮುಖಭಂಗ

ಬಿ.ಎಸ್.ಯಡಿಯೂರಪ್ಪಗೆ ಭಾರೀ ಮುಖಭಂಗ
ಶಿವಮೊಗ್ಗ , ಸೋಮವಾರ, 3 ಜೂನ್ 2019 (18:35 IST)
ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದ ಬಿಜೆಪಿಗೆ ಅದರಲ್ಲೂ ಬಿ.ಎಸ್.ಯಡಿಯೂರಪ್ಪಗೆ ಈಗ ಭಾರೀ ಮುಖಭಂಗವಾಗಿದೆ.

ಬಿಜೆಪಿ ಪಕ್ಷ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಗ್ಗರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಕಾಂಗ್ರೆಸ್ ಮೈತ್ರಿ ಅಧಿಕಾರದ ಗದ್ದುಗೆ ಹಿಡಿದಿದೆ. ಶಿಕಾರಿಪುರ ಪುರಸಭೆಯ 23 ಸ್ಥಾನಗಲ್ಲಿ ಕಾಂಗ್ರೇಸ್ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಮೂರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಶಿರಾಳಕೊಪ್ಪ ಕೂಡ ಕಾಂಗ್ರೇಸ್ ಮೈತ್ರಿ ಪಾಲಾಗಿದೆ. ಒಟ್ಟು 12 ಸ್ಥಾನಗಳಲ್ಲಿ
ಕಾಂಗ್ರೇಸ್ 07, ಬಿಜೆಪಿ 02, ಜೆಡಿಎಸ್ 03 ಪಾಲಾಗಿದೆ.

ಸೊರಬದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಬಿಜೆಪಿ ಭೇದಿಸಿದೆ. ಒಟ್ಟು 11 ಸ್ಥಾನಗಳಲ್ಲಿ ಬಿಜೆಪಿ 06, ಕಾಂಗ್ರೆಸ್ 04, ಜೆಡಿಎಸ್ 01, ಪಕ್ಷೇತರ 01 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಸಾಗರ ನಗರಸಭೆ ಈ ಬಾರಿ ಬಿಜೆಪಿ ಪಾಲಾಗಿದೆ. ಒಟ್ಟು 31 ಸ್ಥಾನಗಳಲ್ಲಿ bjp16, Cong 09, JDS 01,
Independent 01 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಹೊಸನಗರ ಪಟ್ಟಣ ಪಂಚಾಯಿತಿ ಚುನಾವಣೆ ಯಲ್ಲಿ ಈ ಬಾರಿ ಕಾಂಗ್ರೆಸ್ ಮೈತ್ರಿ ಮೇಲುಗೈ ಸಾಧಿಸಿದೆ. ಒಟ್ಟು 11 ಸ್ಥಾನಗಳಲ್ಲಿ Cong 04, Bjp 04, JDS 03 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ದುರ್ವಾಸನೆ ತಾಳದೆ ಮೂಗು ಮುಚ್ಚಿಕೊಂಡ ವರದಿಗಾರ್ತಿ