Publish Date: Mon, 03 Jun 2019 (18:17 IST)
Updated Date: Mon, 03 Jun 2019 (18:19 IST)
ಜಾರ್ಖಂಡ್ ಮುಖ್ಯಮಂತ್ರಿ ರಘುಭರ್ ದಾಸ್ ಸಂದರ್ಶನ ಮಾಡುತ್ತಿದ್ದ ವರದಿಗಾರ್ತಿಯೊಬ್ಬಳು ದುರ್ವಾಸನೆ ತಾಳದೆ ಮೂಗು ಮುಚ್ಚಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.
ಮುಖ್ಯಮಂತ್ರಿ ರಘುಭರ್ ದಾಸ್ ಪತ್ರಿಕಾ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ ಕಂಠಪೂರ್ತಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಇದರಿಂದ ವರದಿಗಾರ್ತಿ ದುರ್ವಾಸನೆ ತಾಳದೆ ಮೂಗು ಮುಚ್ಚಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಫೇಸಬುಕ್ ಮತ್ತು ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ ಬಳಕೆದಾರರು, ಮುಖ್ಯಮಂತ್ರಿ ವರ್ತನೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಸತ್ಯ ಏನು?
ಮುಖ್ಯಮಂತ್ರಿ ರಘುಭರ್ ದಾಸ್ ಸಂದರ್ಶನ ನಡೆಸುತ್ತಿದ್ದ ವರದಿಗಾರ್ತಿ ನಿಧಿ ಎಬಿಪಿ ನ್ಯೂಸ್ ಚಾನೆಲ್‌ಗೆ ಸಂಬಂಧಿಸಿದವರಾಗಿದ್ದಾರೆ.
ವರದಿಗಾರ್ತಿ ನಿಧಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೇ ನೀಡಿ, ನಾನು ಮೂಗು ಉಜ್ಜುತ್ತಿರುವಾಗ ತೆಗೆದ ವಿಡಿಯೋವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.