ನವದೆಹಲಿ: ಕಳೆದ ಬಾರಿ ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕವೇ ಜನರಿಗೆ ನೆರವಾಗುವ ಮೂಲಕ ಮನೆ ಮಾತಾಗಿದ್ದರು.
									
										
								
																	 
ಇದೀಗ ಅವರದೇ ಹಾದಿಯಲ್ಲಿ ನಡೆಯುತ್ತೇನೆ ಎಂದು ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಾ. ಸುಬ್ರಮಣಿಯಮ್ ಜೈಶಂಕರ್ ಕೂಡಾ ಅಂತಹದ್ದೇ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
									
			
			 
 			
 
 			
			                     
							
							
			        							
								
																	ಟ್ವಿಟರ್ ಮೂಲಕ ಮಹಿಳೆಯೊಬ್ಬರು ಕುವೈತ್ ನಲ್ಲಿ ತನ್ನ ಪತಿ ಕಾಣೆಯಾಗಿದ್ದು, ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಮಹಿಳೆಯ ಮನವಿಗೆ ಟ್ವಿಟರ್ ಮೂಲಕವೇ ಉತ್ತರಿಸಿರುವ ಜೈಶಂಕರ್ ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಈ ಪ್ರಯತ್ನದಲ್ಲಿದ್ದಾರೆ. ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆ ಮೂಲಕ ತಾವೂ  ಸುಷ್ಮಾರಂತೇ ಸುಲಭವಾಗಿ ಕೈಗೆಟುಕುವ ಸಚಿವರು ಎಂದು ಸೂಚನೆ ನೀಡಿದ್ದಾರೆ.