Publish Date: Sun, 02 Jun 2019 (09:11 IST)
Updated Date: Sun, 02 Jun 2019 (09:12 IST)
ನವದೆಹಲಿ: ಸಂಸದರ ಸಂಖ್ಯೆ ಕಡಿಮೆಯಾದರೂ ವಿಪಕ್ಷವಾಗಿ ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸದೀಯ ಸಭೆಯಲ್ಲಿ ತಮ್ಮ ಸಂಸದರಿಗೆ ಪಾಠ ಮಾಡಿದ್ದಾರೆ.
ನಾವು 52 ಮಂದಿ ಸದಸ್ಯರಿರಬಹುದು. ಆದರೆ ನಮ್ಮ ಸಂಖ್ಯೆ ಮುಖ್ಯವಲ್ಲ. ಪ್ರತಿ ದಿನ ಬಿಜೆಪಿಯನ್ನು ಕುಣಿಸಲು ಇಷ್ಟು ಸದಸ್ಯರು ಸಾಕು ಎಂದು ರಾಹುಲ್ ಹೇಳಿದ್ದಾರೆ.
ಅಲ್ಲದೆ, ನೀವು ಯಾವುದಕ್ಕೋಸ್ಕರ ಹೋರಾಡುತ್ತೀರ ಎಂಬುದನ್ನು ತಿಳಿದುಕೊಳ್ಳಿ. ಯಾರ ಬೆಂಬಲವಿಲ್ಲದೆಯೂ ನಮ್ಮ ಪಕ್ಷ ಆವತ್ತು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೇ? ಹಾಗೆಯೇ ಈವತ್ತು ನಮ್ಮ ದೇಶದ ಸಂವಿಧಾನಕ್ಕೋಸ್ಕರ್ ಹೋರಾಡೋಣ. ಕೊಂಚ ಆಕ್ರಮಣಕಾರಿಯಾಗಿರೋಣ. ಧ್ವನಿಯೆತ್ತಿ ಮಾತನಾಡೋಣ ಎಂದು ರಾಹುಲ್ ಸಂಸದರಿಗೆ ಕರೆ ನೀಡಿದ್ದಾರೆ.