Publish Date: Sat, 01 Jun 2019 (17:48 IST)
Updated Date: Sat, 01 Jun 2019 (17:50 IST)
ಪ್ರತಿಬಾರಿ ಸಚಿವಸ್ಥಾನ ಚರ್ಚೆ ಆಗೋವಾಗ ಶಾಸಕ ಬಿ.ಸಿ.ಪಾಟೀಲ್ ಬಾಂಬ್ ಸಿಡಿಸುತ್ತಲೇ ಇದ್ದಾರೆ.
ಕಾಂಗ್ರೆಸ್ ಪಕ್ಷವನ್ನ ಬೀಡುವುದಿಲ್ಲ. ಹೀಗಂತ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಕಮಲವನ್ನ ಬಿಜೆಪಿ ಅವರನ್ನೆ ಕೇಳಿ ನಾನು ಕಾಂಗ್ರೆಸ್ ಪಕ್ಷದವನು ಎಂದಿದ್ದಾರೆ.
ಈ ಬಾರಿ ಸಚಿವ ಸಂಪುಟದ ವಿಸ್ತರಣೆಯಲ್ಲಿ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಅನ್ನೊ ಭರವಸೆ ಇದೆ. ಸ್ವತಃ ನೇರವಾಗಿ ಸಿದ್ದರಾಮಯ್ಯ ಅವರೇ ಪೋನ್ ಮಾಡಿ ತಿಳಿಸಿದ್ದಾರೆ ಎಂದಿದ್ದಾರೆ.
ಗುಂಡೂರಾವ್ ಸಹ ಹೇಳಿದ್ದಾರೆ ಸಚಿವ ಸ್ಥಾನ ಫಿಕ್ಸ್ ಇದೆ ಅಂತ. ನಾನು ಯಾವ ಅತೃಪ್ತನಲ್ಲ, ಯಾರ ಸಂಪರ್ಕವನ್ನು ನಾನು ಮಾಡಿಲ್ಲ ಎಂದಿದ್ದಾರೆ.
ನಾಲ್ಕದಿನ ಬೆಂಗಳೂರುನಲ್ಲಿ ನಾಲ್ಕದಿನ ಹಿರೆಕೇರೂರುನಲ್ಲಿ ಇರುವೆ. ಯಾಕಂದ್ರೆ ನಾನು ವಿಧಾನ ಸಭೆ ಸದಸ್ಯ ಅಲ್ವಾ?
ಸ್ವಲ್ಪ ಅಸಮಾಧಾನವಿದೆ ಅಷ್ಟೇ ಎಂದು ಹಿರೆಕೇರೂರುನಲ್ಲಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.