Publish Date: Mon, 03 Jun 2019 (14:14 IST)
Updated Date: Mon, 03 Jun 2019 (14:16 IST)
ಶಿವಮೊಗ್ಗ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 24 ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಗೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಾರೀ ಮುಖಭಂಗವಾಗಿದೆ.
ಶಿಕಾರಿಪುರ ಪುರಸಭೆಯಲ್ಲಿ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರ 3, ಪಕ್ಷೇತರರಲ್ಲಿ ಒಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ಮೂಲಕ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ತವರು ಕ್ಷೇತ್ರದಲ್ಲೇ ಬಾರೀ ಅವಮಾನವಾಗಿದೆ.
ಹೊಸನಗರ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಜೆಡಿಎಸ್ ಹಾಗೂ 4 ವಾರ್ಡ್‍ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸೊರಬ ಪಟ್ಟಣ ಪಂಚಾಯತಿನ 12 ವಾರ್ಡ್ ಗಳಲ್ಲಿ 6ರಲ್ಲಿ ಬಿಜೆಪಿ, 4ರಲ್ಲಿ ಕಾಂಗ್ರೆಸ್, 1ರಲ್ಲಿ ಜೆಡಿಎಸ್ ಹಾಗೂ 21ರಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ.