Select Your Language

Notifications

webdunia
webdunia
webdunia
webdunia

ಸಿಎಂ ಗ್ರಾಮ ವಾಸ್ತವ್ಯಕ್ಕೆ ಹೆಚ್ಚುತ್ತಿರುವ ಅಪಸ್ವರ

ಸಿಎಂ ಗ್ರಾಮ ವಾಸ್ತವ್ಯಕ್ಕೆ ಹೆಚ್ಚುತ್ತಿರುವ ಅಪಸ್ವರ
ಯಾದಗಿರಿ , ಭಾನುವಾರ, 16 ಜೂನ್ 2019 (18:12 IST)
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇವಲ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ರೆ ಶಾಲೆಯ ಸಮಸ್ಯೆ ಪರಿಹಾರವಾಗುತ್ತದಾ? ಹೀಗಂತ ಗ್ರಾಮ ವಾಸ್ತವ್ಯದ ಕುರಿತು ಅಪಸ್ವರಗಳು ಕೇಳಿಬರುತ್ತಿವೆ.

ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ ಹೇಳಿಕೆ ನೀಡಿದ್ದು, ಯಾದಗಿರಿ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಅವರು ಜೂನ್ 21 ರಂದು ಬರುತ್ತಿರುವದು ಸಂತೋಷದ ವಿಷಯ. ಸಿಎಂ ಒಂದು ವರ್ಷದ ಮೇಲೆ ಯಾದಗಿರಿ ಬಗ್ಗೆ ಕಣ್ಣು ತೆರೆದಿದ್ದಾರೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಸಿಎಂ ಕುಮಾರಸ್ವಾಮಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕೆಂದ್ರೆ ಯೋಚನೆ ಮಾಡಬೇಕಿತ್ತು ಎಂದರು.

ಚಂಡರಕಿ ಶಾಲೆಯಲ್ಲಿ ಅತಿ ಹೈಟೆಕ್ ಸೌಕರ್ಯವಿದೆ. ಕೇವಲ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ರೆ ಶಾಲೆಯ ಸಮಸ್ಯೆ ಪರಿಹಾರವಾಗುತ್ತದಾ? ಜಿಲ್ಲೆಯಿಂದ ಸಾಕಷ್ಟು ಜನ ಕೆಲಸ ಅರಸಿ ಗುಳೇ ಹೋಗುತ್ತಿದ್ದಾರೆ. ಕೈಗಾರಿಕಾ ಸ್ಥಾಪನೆ ಮಾಡುವ ಬಗ್ಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಬೇಕು. ಕಡೆಚೂರ- ಬಾಡಿಹಾಳ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆ ಐಸಿಯು ಹಾಗೂ ಅಗತ್ಯ ಸೌಕರ್ಯವಿಲ್ಲ. ಸಿಎಂ ಶಾಲೆಯಲ್ಲಿ ವಾಸ್ತವ್ಯ ಮಾಡುವದಾದರೆ ಶಿಕ್ಷಕರ ಸಮಸ್ಯೆ ನಿಗಿಸಬೇಕು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಐಎಂಎ ಹಗರಣ; ಬೀದಿಗಿಳಿದ ಜನತೆ ಬೆಂಕಿ ಹಚ್ಚಿ ಆಕ್ರೋಶ