Publish Date: Sun, 16 Jun 2019 (17:46 IST)
Updated Date: Sun, 16 Jun 2019 (17:57 IST)
ಐಎಂಎ ವಂಚನೆಯ ವಿರುದ್ಧ ಆಕ್ರೋಶ ಮುಂದುವರಿದಿದ್ದು, ಪ್ರತಿಭಟನೆಗಳು ಅಲ್ಲಲ್ಲಿ ಮುಂದುವರಿದಿವೆ.
ಕೋಲಾರದಲ್ಲಿ ಐಎಂಎ ವಿರುದ್ಧ ಬೀದಿಗಿಳಿದ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಐಎಂಎ ವಂಚನೆಯ ವಿರುದ್ಧ ಸಿಡಿದ ಆಕ್ರೋಶ ಜನತೆಯಿಂದ ಮುಂದುವರಿದಿದೆ. ನಗರದ ಮೆಕ್ಕೆ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ರಸ್ತೆ ತಡೆ ನಡೆಸಿ ಐಎಂಎ ವಿರುದ್ಧ ಧಿಕ್ಕಾರ ಕೂಗಿದರು ಧರಣಿಕಾರರು.
ಟಿಪ್ಪು ಸೆಕ್ಯೂಲರ್ ಸೇನೆ ಮತ್ತು ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ವಂಚನೆಗೊಳಗಾದವರಿಗೆ ಹಣ ವಾಪಸ್ ಕೊಡಿಸಲು ಒತ್ತಾಯ ಮಾಡಲಾಯಿತು. ಕೆಲ ಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದ್ರು. ಮನ್ಸೂರ್ ಖಾನ್ ಬಂಧಿಸಿ ಶಿಕ್ಷಿಸಲು ಒತ್ತಾಯಿಸಿದ ಮುಷ್ಕರ ನಿರತರು, ಮನ್ಸೂರ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.