Publish Date: Sat, 15 Jun 2019 (18:59 IST)
Updated Date: Sat, 15 Jun 2019 (19:01 IST)
SIT ಮೂಲಕ ರಾಜ್ಯ ಸರ್ಕಾರ ಐಎಂಎ ಪ್ರಕರಣವನ್ನ ಮುಚ್ಚಿ ಹಾಕುತ್ತದೆ ಎಂದು ಬಿಜೆಪಿ ಸಂಸದೆ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ತನಿಖೆಯನ್ನ CBI ಗೆ ವಹಿಸಲೇಬೇಕು ಅಂತಾ ನಾವು ಒತ್ತಾಯಿಸುತ್ತೇವೆ. ನಾವೆಲ್ಲ ಸಂಸದರೂ ಇದೇ ಜೂನ್ 17ಕ್ಕೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸ್ತೇವೆ. ಹೀಗಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
SIT ಮೂಲಕ ರಾಜ್ಯ ಸರ್ಕಾರ ಪ್ರಕರಣವನ್ನ ಮುಚ್ಚಿ ಹಾಕುತ್ತದೆ. ಹಾಗಾಗಿ ಪ್ರಕರಣದ ತನಿಖೆಯನ್ನ CBIಗೆ ವಹಿಸಲೇಬೇಕು ಅಂತಾ ಒತ್ತಾಯಿಸುತ್ತೇವೆ ಎಂದರು.
ಇನ್ನು, ಈಗಾಗಲೇ ED ಇಲಾಖೆ FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಐಎಂಎ ಪ್ರಕರಣದ ಆರೋಪಿ ಮನ್ಸೂರ್ ಪರವಾಗಿ ನಾವಿದ್ದೇವೆ, ನಮ್ಮ ಸರ್ಕಾರ ಇದೆ ಅಂತ ಜಮೀರ್ ಹೇಳಿಕೆ ವಿಚಾರ ಕುರಿತು ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಸಚಿವ ಜಮೀರ್ ಅವ್ರನ್ನ ಬಂಧಿಸುವಂತೆ ಆಗ್ರಹ ಮಾಡಿದ್ರು.
ಜಮೀರ್ ಮನೆಯಲ್ಲೇ ಮನ್ಸೂರ್ ಇರಬಹುದು. ಜಮೀರ್ ಅವ್ರೇ ಮನ್ಸೂರ್ ಅವ್ರನ್ನ ಅಡಗಿಸಿಯಿಟ್ಟಿದ್ದಾರೆ ಎಂದು ದೂರಿದ್ರು.