Publish Date: Tue, 11 Jun 2019 (14:10 IST)
Updated Date: Tue, 11 Jun 2019 (14:12 IST)
ಮುಸ್ಲಿಂ ಬಾಂಧವರು ಗೃಹ ಸಚಿವರಿಗೆ ಮನವಿ ಮಾಡಿದ್ದು, ಎಷ್ಟೇ ದೊಡ್ಡವರಿದ್ದರೂ ಕ್ರಮ ಕೈಗೊಳ್ಳಿ ಅಂತ ಆಗ್ರಹ ಮಾಡಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದು, ಐಎಂಎ ಪ್ರಕರಣದಲ್ಲಿ ಹಲವು ಬಡವರಿಗೆ ಮೋಸ ಆಗಿದೆ.
ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿ ಎಂದು ಮನವಿ ಮಾಡಿದ್ದೇವೆ. ಎಷ್ಟೇ ದೊಡ್ಡವರಿದ್ದರೂ ತಲೆ ಕೆಡಿಸಿಕೊಳ್ಳದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.
ಒಂದು ವೇಳೆ ಎಸ್ಐಟಿ ತನಿಖೆ ನಮಗೆ ಸಮಾಧಾನ ತರದಿದ್ದರೆ ಸಿಬಿಐ ತನಿಖೆಗೆ ವಹಿಸಬೇಕು ಎಂದ ಅವರು, ಈ ಕುರಿತು ಗೃಹ ಸಚಿವ ಎಂ.ಬಿ.ಪಾಟೀಲ್‌ಗೆ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ ಎಂದು ಹೇಳಿದ್ರು.