Select Your Language

Notifications

webdunia
webdunia
webdunia
webdunia

ಐಎಂಎ ಪ್ರಕರಣ; ರೋಷನ್ ಬೇಗ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಐಎಂಎ ಪ್ರಕರಣ; ರೋಷನ್ ಬೇಗ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು , ಗುರುವಾರ, 13 ಜೂನ್ 2019 (11:59 IST)
ಬೆಂಗಳೂರು : ಐಎಂಎ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆಂಬ ಮಾಜಿ ಶಾಸಕ ರೋಷನ್ ಬೇಗ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.




ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ದಿಢೀರ ಸುದ್ದಗೋಷ್ಟಿ ಕರೆದ ರೋಷನ್ ಬೇಗ್, ಇದರಲ್ಲಿ ನನ್ನ ಪಾತ್ರವಿಲ್ಲ ನನ್ನ ವಿರುದ್ದ ಪಿತೂರಿ ನಡೆಸಲಾಗುತ್ತಿದ್ದು, ನಾನು ಬೆಂಗಳೂರಿನಿಂದ ನವದೆಹಲಿಗೆ ಹೋದ ವೇಳೆಯಲ್ಲಿ ಆಡಿಯೋ ವೈರಲ್‌ ಆಗಿದೆ. ಇದರ ಹಿಂದೆ ಹಲವರ ಕೈವಾಡವಿದೆ ಅಂತ ಆರೋಪಿಸಿದ್ದರು.


ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮಾಧ್ಯಮದವರ ಮುಂದೆ ಏನ್ ಹೇಳ್ತೀಯಪ್ಪ?ಹೋಗಿ ಎಸ್.ಐ.ಟಿ ಮುಂದೆ ಹೇಳಪ್ಪ. ಐಎಂಎಬಹುಕೋಟಿ ವಂಚನೆ ಹಗರಣದಲ್ಲಿ  ಎಸ್.ಐ.ಟಿ ರಚನೆಯಾಗಿದೆ. ಈ ಬಗ್ಗೆ ವಿಶೇಷ ತನಿಖಾ ತಂಡ ಸಂಪೂರ್ಣವಾಗಿ ತನಿಖೆ ನಡೆಸಲಿದೆ ಎಂದು ಮಾಜಿ ಶಾಸಕ ರೋಷನ್ ಬೇಗ್ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರ ದಾಳಿ; ಟ್ವೀಟರ್ ನಲ್ಲಿ ವಿಷಾದ ವ್ಯಕ್ತಪಡಿಸಿದ ಸಿಎಂ