Select Your Language

Notifications

webdunia
webdunia
webdunia
webdunia

ರೈತರಿಗೆ ದೋಖಾ ಮಾಡೋಲ್ಲ; ಮಾಧ್ಯಮಗಳ ವಿರುದ್ಧ ಸಿಎಂ ಸಿಡಿಮಿಡಿ

ರೈತರಿಗೆ ದೋಖಾ ಮಾಡೋಲ್ಲ; ಮಾಧ್ಯಮಗಳ ವಿರುದ್ಧ ಸಿಎಂ ಸಿಡಿಮಿಡಿ
ಬೆಂಗಳೂರು , ಮಂಗಳವಾರ, 11 ಜೂನ್ 2019 (14:24 IST)
ರೈತನಿಗೆ ನಾವು ದೋಖಾ ಹಾಕೊಲ್ಲ. ರಾಷ್ಟ್ರೀಯ ಬ್ಯಾಂಕ್ ವರ್ಗೀಕರಣ ಮಾಡೋವಾಗ ತಪ್ಪಾಗಿದೆ. ಇದು ರಾಷ್ಟ್ರೀಯ ಬ್ಯಾಂಕ್ ನ ಸಮಸ್ಯೆ. ಆದ್ರೆ ಮಾಧ್ಯಮಗಳು ಸುದ್ದಿ ಮಾಡ್ತಿವೆ. ಹೀಗಂತ ಸಿಎಂ ಸಿಡಿಮಿಡಿಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಅಕೌಂಟ್ ಗಳಿಂದ ಸಾಲಮನ್ನಾದ ಹಣ ರೀಫಂಡ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ನಮ್ಮಿಂದ ತಪ್ಪಾಗಿರೋದು ಅಂತ ಬ್ಯಾಂಕ್ ನವರೇ ಹೇಳಿಕೊಂಡಿದ್ದಾರೆ. ಜನರನ್ನ ತಪ್ಪು ದಾರಿಗೆ ಎಳೆಯಬೇಡಿ. ಅಸತ್ಯವಾಗಿರೋದನ್ನ ತೋರಿಸಬೇಡಿ. 800 ರೈತರಿಗೆ ಈ ರೀತಿ ಸಮಸ್ಯೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಿಂದ ತಪ್ಪಾಗಿರೋದು,ನಮ್ಮಿಂದ ಅಲ್ಲ ಎಂದರು.

ನರೇಂದ್ರ ಮೋದಿ ಅವರದ್ದು ಸ್ವಲ್ಪ ತೋರಿಸಿ. ಬರೀ ನಮ್ದೇ ತಪ್ಲು ಅಂತ ಹೇಳಬೇಡಿ ಎಂದರು.

ನಿಮಗೆ ರಾಜ್ಯದ ಅಭಿವೃದ್ಧಿ ಬೇಕಾ ಅಥವಾ ಹಾಳಾಗ್ಬೇಕಾ ಎಂದು ಮಾಧ್ಯಮ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. 3021 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ನಿಂದ ‌ 11ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಈ ರೈತರಿಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ‌ಮಾಡಿದ್ದೇವೆ ಎಂದರು.

ಅಸತ್ಯ ಸುದ್ದಿ ಪ್ರಚಾರ ಮಾಡಿ ನಿಮಗೇನು ಲಾಭ? ರೈತರು ಆತಂಕ ಆಗುವಂತೆ ನೀವೇ ಮಾಡ್ತಿದ್ದೀರಾ. ಇದು ಕೇವಲ 200 ರೈತರ ಸಮಸ್ಯೆ ಅಲ್ಲ. 13123 ರೈತರಿಗೆ ಹೀಗೆ ಆಗಿದೆ. ಮೋದಿ ಬಗ್ಗೆನೂ ತೋರಿಸಿ. ರಾಷ್ಟ್ರೀಯ ಬ್ಯಾಂಕ್ ಸಮಸ್ಯೆ ಅದು ಅಂತ ಸಿಎಂ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಖಡಕ್ ಎಚ್ಚರಿಕೆ