Publish Date: Sat, 15 Jun 2019 (20:20 IST)
Updated Date: Sat, 15 Jun 2019 (20:22 IST)
ಎಲ್ಲಿ ಹೋಯ್ತು ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಯಲ್ಲಿ ತೊಡೆ ತಟ್ಟಿದ ಶಕ್ತಿ? ಹೀಗಂತ ಬಿಜೆಪಿ ಶಾಸಕ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ. ಎಲ್ಲಿ ಹೋಯ್ತು ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಯಲ್ಲಿ ತೊಡೆ ತಟ್ಟಿದ ಶಕ್ತಿ? ಆವತ್ತು ತೊಡೆ ತಟ್ಟಿ ಇವತ್ತು ಪಾಪ ಮಾಡಿದ್ರಿ. ನಿಮ್ಮ ಪಾಪದ ಕೊಡ ತುಂಬಿದೆ. ನರ ಸತ್ತ ಸರ್ಕಾರ ಇದು ಎಂದು ಲೇವಡಿ ಮಾಡಿದ್ರು.
ನಾವು ಸಿಎಂ ಮನೆಗೆ ನಾಳೆ ಮುತ್ತಿಗೆ ಹಾಕುತ್ತಿದ್ದೇವೆ. ಆದರೆ ಸಿಎಂ ಮನೆ ಎಲ್ಲಿದೆ? ತಾಜ್ ವೆಸ್ಟೆಂಡ್ ನಲ್ಲಿ ಇದ್ಯಾ? ನಮಗೆ ಎಲ್ಲಿಗೆ ಮುತ್ತಿಗೆ ಹಾಕಬೇಕು ಅಂತಾ ಗೊಂದಲ ನಮಗೆ ಕಾಡ್ತಿದೆ ಎಂದು ಅಣಕವಾಡಿದ್ರು.
ಮೈತ್ರಿ ಸರ್ಕಾರ ನಡೆಯುವ ಬಗ್ಗೆ ಅಪ್ಪ- ಮಗ ಕೂತು ಯೋಚನೆ ಮಾಡಬೇಕು ಅಂತ ಶಾಸಕ ವಿ.ಸೋಮಣ್ಣ ಹೇಳಿದ್ರು.